ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಅಭಿರಾಮ ಹೆಗಡೆ, ಬೆಂಬಲಿಗರು ಬಿಜೆಪಿ ಸೇರ್ಪಡೆ

Published 20 ಏಪ್ರಿಲ್ 2024, 12:36 IST
Last Updated 20 ಏಪ್ರಿಲ್ 2024, 12:36 IST
ಅಕ್ಷರ ಗಾತ್ರ

ಶಿರಸಿ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ, ಬಿಜೆಪಿಯ ತತ್ವ ಸಿದ್ಧಾಂತವನ್ನು ಮೆಚ್ಚಿಕೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಇಲ್ಲಿನ ಅಭಿರಾಮ್ ಹೆಗಡೆ ಬಿಜೆಪಿ ಸೇರಿದರು.‌

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಕಚೇರಿಯಲ್ಲಿ ನೂತನವಾಗಿ ಪಕ್ಷಕ್ಕೆ ಸೇರಿದ ಹೆಗಡೆ ಅವರನ್ನು ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು. ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿತವಾಗಿರುವ ಬಿಜೆಪಿಯಲ್ಲಿ ಒಟ್ಟಾಗಿ ಕೆಲಸ ಮಾಡಿ, ಮೋದಿಜಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಪಣತೋಡೋಣ ಎಂದು ಕಾಗೇರಿ ಕರೆ ನೀಡಿದರು. 

ಅಭಿರಾಮ್ ಹೆಗಡೆ ಮಾತನಾಡಿ, ಮೂರನೇ ಬಾರಿ ಮೋದಿ ಪ್ರಧಾನಿಯಾಗಬೇಕು. ಕಾಗೇರಿ ಅವರು ಅತ್ಯಧಿಕ ಮತಗಳಿಂದ ಸಂಸದರಾಗಬೇಕು. ಅವರು ಮತ್ತೊಮ್ಮೆ ನಮ್ಮ ಪ್ರತಿನಿಧಿಯಾಗಬೇಕು ಎಂಬ ಉದ್ದೇಶದಿಂದ ಬಿಜೆಪಿ ಪಕ್ಷವನ್ನು ಸೇರಿದ್ದೇನೆ. ಈ ಹಿಂದೆಯೂ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಹುದ್ದೆಯ ಆಸೆಗಾಗಿ ಸೇರಿಲ್ಲ ಎಂದು ಸ್ಪಷ್ಟಪಡಿಸಿದರು. ಇವರೊಂದಿಗೆ ನಾಗರಾಜ ಹೆಗಡೆ ಹಾಲಳ್ಳ, ರಮಣ ಹೆಗಡೆ ಕಕ್ಕೋಡ, ಮಂಜಣ್ಣ ಜಿಗಳೇಮನೆ, ಸೀತಾರಾಮ್ ಹೆಗಡೆ ಹೆಗಡೆಕಟ್ಟಾ, ಮಂಜು ಗೌಡ ಹೆಗ್ಗಾರ, ಉಮೇಶ್ ಹೆಗಡೆ ಕೂಗ್ತೇಮನೆ ಪಕ್ಷ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT