ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ಮೊಸಳೆ ದಾಳಿಯಿಂದ ಸಾವು

Last Updated 3 ನವೆಂಬರ್ 2022, 7:04 IST
ಅಕ್ಷರ ಗಾತ್ರ

ದಾಂಡೇಲಿ: ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಹತ್ತಿರ ಕಾಳಿ ನದಿಯಲ್ಲಿ ಗುರುವಾರ ಬೆಳಿಗ್ಗೆ ನೀರಿಗಿಳಿದ ವ್ಯಕ್ತಿಯನ್ನು ಮೊಸಳೆ ಎಳೆದುಕೊಂಡು ಹೋಗಿದೆ. ಬಂಗೂರ ನಗರ ನಿವಾಸಿ ಪಿತಾಂಬರದಾಸ ಮಹೇಶ್ವರಿ (65) ಮೃತರು. ಅವರ ಮೃತದೇಹವು ಕುಳಗಿ ಸೇತುವೆ ಲಯ ಕೆಳಭಾಗದಲ್ಲಿ ಪತ್ತೆಯಾಗಿದೆ.

'ಈಶ್ವರ ದೇವಸ್ಥಾನದಿಂದ ಮೆಟ್ಟಿಲು ಇಳಿದು ನದಿಯಲ್ಲಿ ಈಜುತ್ತಿದ್ದಾಗ ನದಿಯ ಮಧ್ಯದಿಂದ ಎರಡು ಮೊಸಳೆಗಳು ಒಮ್ಮೆಲೇ ದಾಳಿ ಮಾಡಿ ಅವರನ್ನು ಎಳೆದುಕೊಂಡು ಹೋಗಿವೆ. ನಾನು ವಾಯುವಿಹಾರಕ್ಕೆಂದು ಸೇತುವೆ ಮೇಲಿದ್ದಾಗ ಈ ದೃಶ್ಯವನ್ನು ನೋಡಿದ್ದೇನೆ' ಎಂದು ಪ್ರತ್ಯಕ್ಷದರ್ಶಿ ಕೃಷ್ಣಾ ಪೂಜಾರಿ ಹೇಳಿದ್ದಾರೆ.

ದಾಂಡೇಲಿಯಲ್ಲಿ ಒಂದು ವರ್ಷದಲ್ಲಿ ನಡೆದ ಮೊಸಳೆ ದಾಳಿಯ ಐದನೇ ದುರಂತ ಇದಾಗಿದೆ. ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಅಪ್ಪಾರಾವ್ ಕಲ್ಲಶೆಟ್ಟಿ, ಸಂದೀಪ ನಾಯಕ, ಡಿವೈಎಸ್ಪಿ ಕೆ.ಎಲ್.ಗಣೇಶ, ಸಿಪಿಐ ಬಿ.ಎಸ್.ಲೋಕಾಪುರ, ನಗರಾಡಳಿತ ಮತ್ತು ತಾಲ್ಲೂಕಾಡಳಿತದ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT