‘ಯಲ್ಲಾಪುರ ಶಾಸಕರ ನಡೆ ಕಾಂಗ್ರೆಸ್ ಕಡೆ’
ಯಲ್ಲಾಪುರ ಶಾಸಕರ ನಡೆ ಕಾಂಗ್ರೆಸ್ ಪಕ್ಷದ ಕಡೆ ಇದೆ ಎಂದು ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಹೇಳಿದರು. ಸರ್ಕಾರದ ನಡೆ ಕಾರ್ಯಕರ್ತರ ಕಡೆ ಸಮಾರಂಭದಲ್ಲಿ ಮಾತನಾಡಿದ ಅವರು ‘ಪಕ್ಷ ಸರ್ಕಾರ ಕಾರ್ಯಕರ್ತರ ಭಾವನೆಗಳಿಗೆ ಹೆಚ್ಚು ಸ್ಪಂದಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಯಲ್ಲಾಪುರದಲ್ಲಿ ಶಾಸಕರ ನಡೆಯೂ ಕಾಂಗ್ರೆಸ್ ಕಡೆ ಇದೆ’ ಎಂದರು. ಕಾರ್ಯಕರ್ತರು ಜನರೊಂದಿಗೆ ಹೆಚ್ಚು ಹೆಚ್ಚು ಬೆರೆತು ಕೆಲಸ ಮಾಡಬೇಕು. ಕಾರ್ಯಕರ್ತರ ತ್ಯಾಗದಿಂದ ಮಾತ್ರ ಪಕ್ಷ ಉಳಿಯುತ್ತದೆ. ನಾಯಕತ್ವ ಬೆಳೆಯುತ್ತದೆ’ ಎಂದರು.