ಕಾರವಾರ: ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್, ದೂರದ ಊರುಗಳಿಂದ ಉದ್ಯೋಗ, ವಿದ್ಯಾಭ್ಯಾಸ, ತರಬೇತಿಗೆಂದು ಬಂದವರನ್ನು ಅತಂತ್ರವಾಗಿಸಿದೆ. ಇದ್ದಲ್ಲೇ ಇರಲೂ ಆಗದೇ ತಮ್ಮ ಸ್ವಂತಊರುಗಳಿಗೂಹೋಗಲಾಗದೆ ಪರದಾಡುತ್ತಿದ್ದಾರೆ.

ನಗರದ ಕಾಳಿ ನದಿ ಸೇತುವೆ ಬಳಿಯ ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುವ ದೀಪಕ್ ದೇಸಾಯಿ ಮತ್ತು ಪಿ.ಎನ್.ಭಟ್, ಗುರುವಾರ ಮಧ್ಯಾಹ್ನ12.30ರಸುಮಾರಿಗೆ ಪತ್ರಿಕಾ ಭವನದ ಬಳಿನಡೆದುಕೊಂಡು ಬಂದರು. ಒಬ್ಬರು ಅಡುಗೆ ಮಾಡುವವರಾದರೆ, ಮತ್ತೊಬ್ಬರು ತರಕಾರಿ ಹೆಚ್ಚಿ ಅಡುಗೆಗೆ ಸಹಾಯ ಮಾಡುವವರು. ಇಬ್ಬರೂ ಕಾರವಾರದಿಂದ ಸುಮಾರು 27 ಕಿಲೋಮೀಟರ್ ದೂರದ ಅವರ್ಸಾಕ್ಕೆ ಹೊರಟವರು.

‘ಹಲವು ದಿನಗಳಿಂದ ಹೋಟೆಲ್ಗೆ ಗ್ರಾಹಕರಿಲ್ಲ. ಆದ್ದರಿಂದ ವ್ಯವಹಾರವಿಲ್ಲದೇ ನಮಗೂ ಕೆಲಸವಿಲ್ಲ. ಈಗಿನ ಪರಿಸ್ಥಿತಿ ನೋಡಿದರೆ ಇನ್ನೆಷ್ಟು ದಿನಹೀಗೇಮುಂದುವರಿಯಬಹುದು ಎಂದು ಗೊತ್ತಾಗುತ್ತಿಲ್ಲ. ಇನ್ನೂಹೋಟೆಲ್ನಲ್ಲೇಇರಲು ಸಾಧ್ಯವಿಲ್ಲ. ಹಾಗಾಗಿ ಬಟ್ಟೆ–ಬರೆ ಕಟ್ಟಿಕೊಂಡು ಹೊರಟೆವು’ ಎಂದು ಹೇಳುತ್ತ, ಕೈಯಿಂದ ಜಾರುತ್ತಿದ್ದ ಬಟ್ಟೆಯ ಚೀಲವನ್ನು ಸರಿಪಡಿಸಿಕೊಂಡರು.

ಎಲ್ಲೆಡೆ ಪೊಲೀಸ್ ನಾಕಾಬಂದಿ ಮಾಡಲಾಗಿದ್ದು, ಅನಗತ್ಯವಾಗಿ ಸಂಚರಿಸುವುದನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪೊಲೀಸ್, ಆರೋಗ್ಯ ಕಾರ್ಯಕರ್ತರು ಮತ್ತುಅಡುಗೆ ಅನಿಲ ಸಾಗಣೆ ಟ್ಯಾಂಕರ್ನಂತಹ ಕೆಲವು ವಾಹನಗಳಷ್ಟೇ ಕಾಣಿಸುತ್ತಿದ್ದವು. ಹಾಗಾಗಿ ಅವರ್ಸಾಕ್ಕೆ ಸಾಗಲುಒಂದಾದರೂ ವಾಹನ ಸಿಗುತ್ತದೆಯೇ ಎಂದು ಆಸೆ ಕಂಗಳಲ್ಲಿ ನೋಡುತ್ತಲೇ ಆಗಾಗ ಹಿಂದೆ ತಿರುಗಿ ನೋಡುತ್ತಿದ್ದರು. ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೇ ಬಿರುಸಾಗಿ ಹೆಜ್ಜೆ ಹಾಕಿದರು.

ಇತ್ತ ಸೀಬರ್ಡ್ ನೌಕಾನೆಲೆಯಲ್ಲಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿಪಡೆಯಲು ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ಆಂಧ್ರಪ್ರದೇಶದಿಂದ ವಿದ್ಯಾರ್ಥಿಗಳು ಬಂದಿದ್ದರು. ಲಾಕ್ ಡೌನ್ ಪ್ರಕಟಿಸುವ ವೇಳೆಗೆ ಅವರ ತರಬೇತಿಯ ಅವಧಿಯೂ ಮುಗಿದಿತ್ತು. ನಮ್ಮ ರಾಜ್ಯಗಳ ವಿದ್ಯಾರ್ಥಿಗಳು ಅವರವರ ಮನೆಗಳಿಗೆ ತಲುಪಿದ್ದಾರೆ. ಆದರೆ, ಆಂಧ್ರಪ್ರದೇಶದಿಂದ ಬಂದಿದ್ದ ಏಳು ವಿದ್ಯಾರ್ಥಿನಿಯರೂ ಸೇರಿದಂತೆ 21 ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಹೋಗಲು ಸಾಧ್ಯವಾಗದೇ ಪರದಾಡುವಂತಾಗಿದೆ.

ಹಲವರು ಕಾರವಾರ, ಅರಗಾ, ಚೆಂಡಿಯಾ, ಬಿಣಗಾಗಳಲ್ಲಿ ಬಾಡಿಗೆ ಕೊಠಡಿಗಳಲ್ಲಿ ವಾಸ ಮಾಡುತ್ತಿದ್ದರು. ಕೊರೊನಾ ವೈರಸ್ ಹರಡುತ್ತಿರುವ ಕಾರಣ ರೈಲು, ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ. ಹಾಗಾಗಿ ಅವರಿಗೆಊರಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಸೂಕ್ತವಾಗಿ ಸಂವಹನ ಮಾಡಲು ಭಾಷಾ ಸಮಸ್ಯೆಯೂ ಎದುರಾಗಿಪರದಾಡುತ್ತಿದ್ದರು. ವಿದ್ಯಾರ್ಥಿಗಳ ಸಂಕಷ್ಟದಮಾಹಿತಿ ಪಡೆದ ನೌಕಾನೆಲೆಯ ಅಧಿಕಾರಿಗಳು, ಊಟ, ತಿಂಡಿಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ವೈರಸ್ ಹಾವಳಿ ಕೊನೆಯಾಗುವುದನ್ನೇ ಕಾಯುತ್ತಿದ್ದಾರೆ.

ಹಡಗುಗಳಿಗೆ ನಿರ್ಬಂಧ

ಕಾರವಾರದ ವಾಣಿಜ್ಯ ಬಂದರಿಗೆ ಹಡಗುಗಳ ಪ್ರವೇಶವನ್ನು ತಡೆಯಲಾಗಿದೆ. ಹಲವಾರು ದಿನಗಳಿಂದ ಸಮುದ್ರದ ಮಧ್ಯದಲ್ಲೇ ಹಲವು ಹಡಗುಗಳಿದ್ದು, ಅದರಲ್ಲಿರುವ ಸಿಬ್ಬಂದಿಗೆ ಅಲ್ಲಿಗೇ ಆಹಾರ, ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.