ಶಿರಸಿ: ಮಹಿಳಾ ಸುರಕ್ಷತೆ ಹಾಗೂ ಮಹಿಳೆಯರ ಮೇಲೆ ನಡೆಯುವ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಿರಸಿ ಉಪವಿಭಾಗದಲ್ಲಿ 21 ಮಹಿಳಾ ಪೊಲೀಸರ ‘ಓಬವ್ವ ತಂಡ’ ಕಾರ್ಯಾರಂಭ ಮಾಡಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ, ಎಸ್ಪಿ ಶಿವಪ್ರಕಾಶ ದೇವರಾಜು ಅವರು, ‘ಹೈದ್ರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಅಮಾನವೀಯ. ಮಹಿಳೆಯರ ಸುರಕ್ಷತೆ ಹಿನ್ನೆಲೆಯಲ್ಲಿ ಓಬವ್ವ ತಂಡ ರಚಿಸಲಾಗಿದೆ. ಕಾಡಿನ ಜಿಲ್ಲೆಯಲ್ಲಿ ಶಾಲೆ–ಕಾಲೇಜು ಮುಗಿಸಿ ಮನೆಗೆ ಹೋಗುವ ಮಕ್ಕಳ ಸುರಕ್ಷತೆ ಮಹತ್ವದ್ದಾಗಿದೆ. ಈ ಮಕ್ಕಳು ಭಯವಿಲ್ಲದೇ ಮನೆ ತಲುಪಲು ಈ ವ್ಯವಸ್ಥೆ ಅನುಕೂಲವಾಗಲಿದೆ. ಉಪವಿಭಾಗದಲ್ಲಿ ಮೂವರು ಎಎಸ್‌ಐ, 18 ಪಿಸಿ ಸೇರಿ 21 ಜನರ ಮಹಿಳಾ ತಂಡ ಸಿದ್ಧವಾಗಿದೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಕೀಟಲೆ ಮಾಡುವ ಯುವಕರ ಮೇಲೆ ಕಣ್ಣಿಡಲಾಗುತ್ತದೆ. ಲೈಂಗಿಕ ದೌರ್ಜನ್ಯ ಹಾಗೂ ಪೊಸ್ಕೊ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಮಹಿಳೆಯರಿಗೆ ತೊಂದರೆ ಎದುರಾದಲ್ಲಿ ಮಹಿಳಾ ಪೊಲೀಸರನ್ನು ಸಂಪರ್ಕಿಸಬಹುದು. ಯಾವುದೇ ಠಾಣೆಗೆ ಮಾಹಿತಿ ನೀಡಿದರೂ, ತಕ್ಷಣ ಸಿಬ್ಬಂದಿ ಸ್ಪಂದಿಸುತ್ತಾರೆ. ಓಬವ್ವ ತಂಡಕ್ಕೆ ಎರಡು ವಾಹನ ನೀಡಲಾಗಿದೆ. ಸಮಸ್ಯೆ ಎದುರಾದಾಗ ಸ್ಪಂದಿಸಲು ಇದು ಅನುಕೂಲವಾಗಿದೆ ಎಂದು ಹೇಳಿದರು. ಡಿವೈಎಸ್ಪಿ ಜಿ.ಟಿ.ನಾಯಕ, ಸಿಪಿಐ ಗಿರೀಶ, ಪಿಎಸ್ಐ ಮಾದೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.