ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಕ್ ಕಳ್ಳನ ಬಂಧನ: 3 ಬೈಕ್ ಜಪ್ತಿ

Published 23 ಜೂನ್ 2024, 16:14 IST
Last Updated 23 ಜೂನ್ 2024, 16:14 IST
ಅಕ್ಷರ ಗಾತ್ರ

ಯಲ್ಲಾಪುರ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಯಲ್ಲಾಪುರ ಪೊಲೀಸರು ಶನಿವಾರ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಆತನಿಂದ ಅಂದಾಜು ₹ 1 ಲಕ್ಷ 10 ಸಾವಿರ ಮೌಲ್ಯದ ಕಳವು ಮಾಡಿದ 3 ಬೈಕ್ ಜಪ್ತು ಮಾಡಲಾಗಿದೆ.

ತಾಲ್ಲೂಕಿನ ಜಡಗಿನಕೊಪ್ಪದ ಕೂಲಿ ಕಾರ್ಮಿಕ ಕೃಷ್ಣ ಸಿದ್ದಿ (27) ಬಂಧಿತ ಆರೋಪಿ. ಈತ ಈ ಹಿಂದೆ ದರೋಡೆ, ಅಡಿಕೆ ಕಳವು, ಬೈಕ್ ಕಳವು, ಪೋಕ್ಸೊ ಮುಂತಾದ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಶಾಮೀಲಾಗಿದ್ದನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕುಂದರಗಿ ಮಜ್ಜಿಗೆಹಳ್ಳದ ನಿವಾಸಿ ಲಕ್ಷ್ಮಣ ಕಾಳು ದೋಯಿಪಡೆ ಮನೆಯ ಮುಂದೆ ನಿಲ್ಲಿಸಿದ್ದ ತಮ್ಮ ಬೈಕ್ ಕಳವಾದ ಕುರಿತು ಮಾರ್ಚ್‌ ತಿಂಗಳಿನಲ್ಲಿ ಠಾಣೆಗೆ ದೂರು ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT