ಗೋಕರ್ಣ: ಇಲ್ಲಿನ ಹಾಫ್ ಮೂನ್, ಪ್ಯಾರಡೈಸ್ ಬೀಚ್‌ಗಳಲ್ಲಿ ಪ್ರವಾಸಿಗರೇ ಅಕ್ರಮವಾಗಿ ಕಟ್ಟಿಕೊಂಡಿದ್ದ 50ಕ್ಕೂ ಹೆಚ್ಚು ಟೆಂಟ್‌ಗಳನ್ನು ಪೊಲೀಸರು ಭಾನುವಾರ ತೆರವು ಮಾಡಿದರು.

ಕೇರಳ ಸೇರಿದಂತೆ ನಾನಾ ಕಡೆಯಿಂದ ಬಂದ ಪ್ರವಾಸಿಗರುಟೆಂಟ್ ನಿರ್ಮಿಸಿಕೊಂಡಿದ್ದರು. ಮಾಹಿತಿ ತಿಳಿದ ಪೊಲೀಸರು ಅವರ ಮನವೊಲಿಸಿ ಕೂಡಲೇ ತೆರವುಗೊಳಿಸುವಂತೆ ಸೂಚಿಸಿದರು.

‘ಯಾವುದೇ ಭದ್ರತೆ ಇಲ್ಲದಿರುವ ಕಾರಣ ಸುರಕ್ಷತೆಯ ಪ್ರಶ್ನೆ ಎದುರಾಗಬಹುದು.ಆಗ ಪೊಲೀಸರು ಕೂಡಲೇ ಸ್ಥಳಕ್ಕೆ ಬರಲು ಅಸಾಧ್ಯ. ಇದರಿಂದ ಪ್ರವಾಸಿಗರಿಗೂ ತೊಂದರೆಯಾಗಬಹುದು. ನಿಮ್ಮ ಒಳ್ಳೆಯದಕ್ಕಾಗಿಯೇ ಈ ಕ್ರಮ ಕೈಗೊಂಡಿದ್ದೇವೆ’ ಎಂದಾಗ ಕೆಲವರು ಸಹಮತ ವ್ಯಕ್ತಪಡಿಸಿ ಟೆಂಟ್‌ತೆರವುಗೊಳಿಸಿದರು.

ಈ ವೇಳೆ ಮಾತನಾಡಿದ ಪಿಎಸ್‌ಐ ಸಂತೋಷಕುಮಾರ್, ‘ಓಂ ಬೀಚ್, ಕುಡ್ಲೆ ಬೀಚ್, ಮೇನ್ಬೀಚ್ ಸೇರಿದಂತೆ ಎಲ್ಲಾ ಆರುಕಡಲತೀರಗಳಲ್ಲಿ ಪರಿಶೀಲನೆ ನಡೆಸಲಾಗಿದೆ.ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರು ಟೆಂಟ್ ಹಾಕದಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಈ ಮಧ್ಯೆ ಪ್ರವಾಸಿಗರ ಈ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರ ಅನುಮತಿಯೂ ಇಲ್ಲದೇ ಪ್ರವಾಸಿಗರು ಕಡಲತೀರಗಳಲ್ಲಿ ಟೆಂಟ್ ಅಳವಡಿಸುತ್ತಾರೆ. ಬಿಯರ್, ಸಿದ್ಧಪಡಿಸಿದ ಆಹಾರ, ಉಳಿಯಲು ಬೇಕಾಗುವ ಸಾಮಗ್ರಿ ತರುತ್ತಾರೆ. ದುರದೃಷ್ಟವಶಾತ್ ಇವರ ದರೋಡೆ, ಬಲತ್ಕಾರ ಸೇರಿದಂತೆ ಏನಾದರೂ ಅಹಿತಕರ ಘಟನೆಯಾದರೆ ಯಾರು ಹೊಣೆ ಎಂಬ ಪ್ರಶ್ನೆ ಸ್ಥಳೀಯರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.