ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹35 ಕೋಟಿ ಬೆಳೆ ವಿಮೆ ಬಿಡುಗಡೆ: ಶಾಸಕ ಶಿವರಾಮ ಹೆಬ್ಬಾರ್

Published 13 ಮೇ 2024, 13:41 IST
Last Updated 13 ಮೇ 2024, 13:41 IST
ಅಕ್ಷರ ಗಾತ್ರ

ಯಲ್ಲಾಪುರ: ʻಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ (ಕೆ.ಡಿ.ಸಿ.ಸಿ ಬ್ಯಾಂಕ್) 2023 - 24 ನೇ ಸಾಲಿನ ಭತ್ತ ಹಾಗೂ ಗೋವಿನ ಜೋಳದ ಬೆಳೆ ಹಾನಿ ವಿಮೆ ₹41 ಕೋಟಿ  ಜಮಾ ಆಗಿದೆʼ ಎಂದು ಕೆ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

ʻಕಳೆದ ಸಾಲಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಭತ್ತ, ಗೋವಿನ ಜೋಳ ಬೆಳೆಗೆ ಹಾನಿಯಾಗಿ ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಈ ಬೆಳೆ ವಿಮೆ ಬಿಡುಗಡೆಯಿಂದಾಗಿ ಭತ್ತ, ಗೋವಿನ ಜೋಳ ಬೆಳೆದು ಜೀವನ ಜೀವನ ಸಾಗಿಸುತ್ತಿದ್ದ ಹಲವಾರು ರೈತರಿಗೆ ಆರ್ಥಿಕ ಶಕ್ತಿ ಬಂದಂತಾಗಿದೆʼ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ʻಯಲ್ಲಾಪುರ ತಾಲ್ಲೂಕಿಗೆ ₹84,85,610, ಮುಂಡಗೋಡ ತಾಲ್ಲೂಕಿಗೆ ₹18,41,53,186  ಹಾಗೂ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ₹15,90,59,753 ( ಒಟ್ಟು ₹35 ಕೋಟಿ) ರೈತರಿಗೆ ಲಭಿಸಿದೆ. ಸರ್ಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸಿ ಈ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಪರಿಹಾರ ಒದಗಿಲಾಗಿದೆ. ವಿಮೆ ಕಂಪನಿಯ ಮಾನದಂಡದ ಅನ್ವಯವಾಗಿ ಉತ್ತರ ಕನ್ನಡ ಜಿಲ್ಲೆಯ ಭತ್ತ ಹಾಗೂ ಗೋವಿನ ಜೋಳವನ್ನು ಬೆಳೆದ ರೈತರಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್  ಮೂಲಕ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿ ರೈತರ ಬ್ಯಾಂಕ್‌ ಖಾತೆಗೆ ಪರಿಹಾರದ ಮೊತ್ತವನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆʼ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT