ಕಾರವಾರ: ತಾಲ್ಲೂಕಿನ ದೇವಳಮಕ್ಕಿಯಲ್ಲಿ ಭಾನುವಾರ ‘ದೇವಳಮಕ್ಕಿ ಬಾಯ್ಸ್’ ನೇತೃತ್ವದಲ್ಲಿ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ದೇವಳಮಕ್ಕಿ ತಂಡ, ವಾಲಿಬಾಲ್ ಟೂರ್ನಿಯಲ್ಲಿ ನಿವಳಿ ಗ್ರಾಮದ ತಂಡ ಪ್ರಶಸ್ತಿ ಪಡೆದವು.

ಮಹಿಳೆಯರ ಥ್ರೋ ಬಾಲ್ ಟೂರ್ನಿಯಲ್ಲಿ ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ತಂಡ, ಹಗ್ಗ ಜಗ್ಗಾಟದಲ್ಲಿ ಆಶಾ ಕಾರ್ಯಕರ್ತೆಯರ ತಂಡವು ವಿಜಯಿಯಾದವು.

ಕೆರವಡಿ, ದೇವಳಮಕ್ಕಿ, ವೈಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಕ್ರೀಡಾಕೂಟದಲ್ಲಿ ಅವಕಾಶ ನೀಡಲಾಗಿತ್ತು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಓಟ ಮತ್ತು ಚಮಚ– ಲಿಂಬೆಹಣ್ಣು ನಡಿಗೆ ಸ್ವರ್ಧೆ, ಪುರುಷರಿಗೆ ಓಟ, ವಾಲಿಬಾಲ್ ಹಾಗೂ ಹಗ್ಗ ಜಗ್ಗಾಟ ಹಮ್ಮಿಕೊಳ್ಳಲಾಗಿತ್ತು.

ಮಹಿಳೆಯರಿಗಾಗಿ ಓಟ, ಚಮಚ– ಲಿಂಬೆಹಣ್ಣು ನಡಿಗೆ ಸ್ವರ್ಧೆ, ಥ್ರೋ ಬಾಲ್ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. 60 ವರ್ಷಕ್ಕಿಂತ ಮೇಲಿನವರೂ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಬಹುಮಾನ ವಿತರಣೆ ಸಮಾರಂಭದಲ್ಲಿ ಮಲ್ಲಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಿದ್ದಪ್ಪ ಗುದ್ದಿ, ಎಸ್.ಐ. ಪ್ರತಾಪ್, ಉಪ ವಲಯ ಅರಣ್ಯಾಧಿಕಾರಿ ಸುಭಾಷ್ ರಾಥೋಡ್, ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವನಶ್ರೀ ಕುಲಕರ್ಣಿ, ದೇವಳಮಕ್ಕಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಗೌಡ, ದೇವಳಮಕ್ಕಿ ಬಾಯ್ಸ್ ಸದಸ್ಯರಾದ ಸುನಿಲ್ ಶೇಟ್, ಮರಿ ಗೌಡ, ಆಗ್ನೇಲ್ ಡಿಸೋಜಾ, ಗುರುದಾಸ್ ಪಾಯ್ದೆ, ದೀಪಕ್ ಹಳದೀಪುರ ಮತ್ತು ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.