ವಿದ್ಯುತ್ ಮಾರ್ಗ ವಿಸ್ತರಣೆ ಇಲ್ಲ
‘ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಉತ್ಪಾದನೆಗೊಂಡ ವಿದ್ಯುತ್‌ನ್ನು ತಾಳಗುಪ್ಪ ಗುತ್ತೂರಿನ ಗ್ರಿಡ್‌ಗೆ ಸಾಗಿಸಲು ವಿದ್ಯುತ್ ಮಾರ್ಗ 440 ಕೆ.ವಿ ಸಾಮರ್ಥ್ಯಕ್ಕೆ ಏರಿಕೆಯಾಗಲಿದೆ. ಆದರೆ ಸುಧಾರಿತ ತಾಂತ್ರಿಕತೆ ಬಳಸಿಕೊಂಡು ಪ್ರಸ್ತುತ ಇರುವ ಕಾರಿಡಾರ್‌ನಲ್ಲಿಯೇ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೀಗಾಗಿ ಮಾರ್ಗದ ವಿಸ್ತರಣೆ ಅಗತ್ಯವಿಲ್ಲ’ ಎಂದು ಕೆಪಿಟಿಸಿಎಲ್ ಅಧೀಕ್ಷಕ ಎಂಜಿನಿಯರ್ ಎಂ.ಶಿಲ್ಪಾ ತಿಳಿಸಿದರು.