ಮೆಲಾಥಿಯಾನ್ 50ಇ.ಸಿ.2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ಎಕರೆಗೆ 8 ಕೆಜಿ ಶೇಕಡಾ 5ರ ಮೆಲಾಥಿಯಾನ್ ಪುಡಿ ಎರಚಬೇಕು
ರೂಪಾ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ
ಭತ್ತದ ಗದ್ದೆಗೆ ವ್ಯಾಪಿಸುವ ತಿಗಣೆ
‘ತೆನೆ ತಿಗಣೆಯು ಮೊಟ್ಟೆ ಒಡೆದು ಮರಿ ಹೊರ ಬರಲು ಸುಮಾರು ಮೂರರಿಂದ ಐದು ದಿನಗಳು ಬೇಕಾಗುತ್ತದೆ. ಜತೆಗೆ ಈ ಹುಳುಗಳು 22ರಿಂದ 28 ದಿನಗಳ ಅವಧಿಯಲ್ಲಿ ಐದು ಹಂತಗಳ ರೂಪದಲ್ಲಿ ಬೆಳೆಯುತ್ತಿದ್ದು. ಒಂದು ಪ್ರೌಢ ಕೀಟವು ಸುಮಾರು 75ರಿಂದ 135 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿರುವುದರಿಂದ ಸಂತನೋತ್ಪತ್ತಿ ತೀವ್ರಗತಿಯಲ್ಲಿ ನಡೆಯುತ್ತದೆ. ಹೀಗಾಗಿ ನೋಡ ನೋಡುತ್ತಿದ್ದಂತೆಯೇ ಭತ್ತದ ಗದ್ದೆಯನ್ನು ವ್ಯಾಪಿಸಿ ಬಿಡುತ್ತವೆ’ ಎಂಬುದು ಕೃಷಿ ವಿಜ್ಞಾನಿಗಳ ಅಭಿಪ್ರಾಯ.