ಶಿರಸಿ: 'ಸಚಿವರ ಆಯ್ಕೆ ಪಕ್ಷದ ಹೈಕಮಾಂಡ್ ಹಾಗೂ ನೂತನ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಹುದ್ದೆ ಬೇಡ ಎನ್ನಲು ನಾನೇನು ಸನ್ಯಾಸಿಯಲ್ಲ' ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಮಂಗಳವಾರ ಇಲ್ಲಿನ ಟಿ.ಎಂ.ಎಸ್.ಸಂಸ್ಥೆ ಆರಂಭಿಸಿರುವ ಸುಪರ್ ಮಾರ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮದವರೊಡನೆ ಅವರು ಮಾತನಾಡಿದರು.

'ಬಾಂಬೆ ಟೀಮ್ ಎಂಬುದು ಈಗ ಮುಗಿದ ಅಧ್ಯಾಯ. ನಾವೆಲ್ಲ ಬಿಜೆಪಿ ಶಾಸಕರು. ಯಾರಿಗೆ ಸಚಿವ ಸ್ಥಾನ ನೀಡಬೇಕೆಂದು ಹಿರಿಯರೇ ತೀರ್ಮಾನಿಸುತ್ತಾರೆ' ಎಂದರು.

ಬೆಳ್ಳಿ ವಿಜೇತೆ ಮೀರಾಬಾಯಿ ಚಾನುಗೆ ₹2 ಕೋಟಿ ಬಹುಮಾನ, ರೈಲ್ವೆ ಹುದ್ದೆಯಲ್ಲಿ ಬಡ್ತಿ

'ಪಕ್ಷದ ಶಿಸ್ತು, ಸಿದ್ಧಾಂತಕ್ಕೆ ತಲೆಬಾಗಿ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಬೇಸರವಿಲ್ಲ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಕಾಲಕಾಲಕ್ಕೆ ತಕ್ಕಂತೆ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ತಲೆಬಾಗುತ್ತೇವೆ' ಎಂದರು.

'ಯಡಿಯೂರಪ್ಪ ನಾಯಕತ್ವದಲ್ಲಿ ಹದಿನೇಳು ತಿಂಗಳು ಕಾರ್ಮಿಕ ಖಾತೆ ನಿಭಾಯಿಸಿದ ನೆಮ್ಮದಿ ಇದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.