ಸಿದ್ದಾಪುರ: ತಾಲ್ಲೂಕಿನ ಬಿಳಗಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾಮಹೋತ್ಸವ ಜ.20ರಿಂದ 28ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ದೇವಸ್ಥಾನದ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ ಹೇಳಿದರು.

ತಾಲ್ಲೂಕಿನ ಬಿಳಗಿಯ ದುರ್ಗಾಂಬಿಕಾ ದೇವಾಲಯದಲ್ಲಿ ಜಾತ್ರೆಯ ಕರಪತ್ರಗಳನ್ನು ಬಿಡುಗಡೆ ಮಾಡಿ ಸುದ್ದಿಗೋಷ್ಠಿ ನಡೆಸಿ ಸೋಮವಾರ ಅವರು ಮಾತನಾಡಿದರು. ಜಾತ್ರೆಯನ್ನು ವ್ಯವಸ್ಥಿತವಾಗಿ ನಡೆಸುವುದಕ್ಕೆ ಉಪಸಮಿತಿಗಳನ್ನು ರಚಿಸಲಾಗಿದೆ. ವಿಶೇಷವಾಗಿ ಜಾತ್ರೆಯಲ್ಲಿ ದೇವಿಯ ಸನ್ನಿಧಿಯಲ್ಲಿ ತಾಲ್ಲೂಕಿನ ರೈತರನ್ನು ಹಾಗೂ ಕೃಷಿಕರನ್ನು ಹೈರಾಣಾಗಿಸುತ್ತಿರುವ ಅಡಕೆ ಎಲೆ ಚುಕ್ಕಿರೋಗ ನಿವಾರಣೆಗೆ ಹಾಗೂ ಕೃಷಿ ಮತ್ತು ಪರಿಸರ ಸಂರಕ್ಷಣೆಗಾಗಿ ಶ್ರೀಸೂಕ್ತ ಹವನ ನಡೆಸಲಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಧನ್ವಂತರಿ ಹವನ ನಡೆಸಲಾಗಿತ್ತು.

ಪ್ರತಿ ಆರು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ದೇವಿಯ ಜಾತ್ರೆಗೆ ಬಿಳಗಿ ಸೀಮೆಯ ಭಕ್ತರಲ್ಲದೇ ಜಿಲ್ಲೆಯ ವಿವಿಧ ತಾಲ್ಲೂಕಿನ ಭಕ್ತರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಕ್ತರು ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ.

ಜ.1ರಂದು ಅಂಕಿ ಹಾಕುವ ಶಾಸ್ತ್ರ ನಡೆಯಲಿದ್ದು, ಜ.11ರಂದು ಹಂಗಾಮಿ ಅಂಗಡಿ ಪ್ಲಾಟುಗಳ ಬಹಿರಂಗ ಹರಾಜು ನಡೆಸಲಾಗುತ್ತಿದೆ. ಜಾತ್ರೆಯಲ್ಲಿ ಮುಖ್ಯವಾಗಿ ಸ್ವಚ್ಛತೆ, ಆರೋಗ್ಯ,ಕುಡಿಯುವ ನೀರಿನ ವ್ಯವಸ್ಥೆ, ಸಾರಿಗೆ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆ ಕುರಿತು ವಿಶೇಷ ಕಾಳಜಿವಹಿಸುವುದರ ಜತೆಗೆ ಸ್ಥಳೀಯ ಗ್ರಾ.ಪಂ ಹಾಗೂ ಪೊಲೀಸ್, ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಗಳ ಸಹಕಾರವನ್ನು ಪಡೆದು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಾಗುವುದು. ಅಲ್ಲದೇ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ.

ಜ.20ರಂದು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಹೊಳೆಚಪ್ಪರದಿಂದ ರಥೋತ್ಸವದ ಮೆರವಣಿಗೆಯೊಂದಿಗೆ ದೇವಿಯನ್ನು ಜಾತ್ರಾಗದ್ದುಗೆಗೆ ತರಲಾಗುತ್ತದೆ.ನಿತ್ಯ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ.21ರಂದು ಶ್ರೀಸೂಕ್ತ ಹವನ, 27ರಂದು ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ 28ರಂದು ಶ್ರೀದೇವಿಯ ವಿಸರ್ಜನೆ ನಡೆಯಲಿದೆ ಎಂದರು.

ಬಿಳಗಿ ಗ್ರಾಪಂ ಅಧ್ಯಕ್ಷ ರಾಜು ನಾಯ್ಕ, ದೇವಾಲಯದ ಆಡಳಿತ ಮಂಡಳಿ ಮೊಕ್ತೇಸರ ಶ್ರೀಧರ ನಾರಾಯಣ ಹೆಗಡೆ ನೀರಗಾರ, ಆದರ್ಶ ಪೈ, ಗಜಾನನ ನಾಯ್ಕ, ಎನ್.ಟಿ.ನಾಯ್ಕ, ಗೋಪಿಚಂದ ಮಡಗಾಂವಕರ, ವಾಸುದೇವ ನಾಯ್ಕ, ಉದಯ, ವೀರೇಶ ಎಂ.ನಾಯ್ಕ, ಗಜಾನನ ಪೈ, ನಾರಾಯಣ ಬಿಳಗಿ,ಮಂಜುನಾಥ ಮಡಿವಾಳ, ಹನುಮಂತ ಮಡಿವಾಳ, ಜೈಪ್ರಕಾಶ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.