ಶಿರಸಿ: ಇಲ್ಲಿನ ಗಣೇಶನಗರದ ಬಳಿಯಿರುವ ಬಸ್ ನಿಲ್ದಾಣ ಪ್ರವೇಶ ದ್ವಾರದಲ್ಲಿ ಕೆರೆ ಅಗಲದಷ್ಟು ಹೊಂಡ ನಿರ್ಮಾಣವಾಗಿದೆ. ಇದು ಬಸ್ಗಳ ಸಂಚಾರಕ್ಕೆ ಕಂಟಕದ ಜತೆಗೆ ಜನರ ಜೀವಕ್ಕೂ ಅಪಾಯ ಆಹ್ವಾನ ನೀಡುತ್ತಿದೆ.

ಸೋಮವಾರ ಸ್ಥಳೀಯರು ಈ ದುರವಸ್ಥೆ ಖಂಡಿಸಿದ್ದಲ್ಲದೇ, ನಗರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ, ಹಾನಗಲ್ ಸೇರಿದಂತೆ ಬಯಲುಸೀಮೆ, ಉತ್ತರ ಕರ್ನಾಟಕ, ಹುಲೇಕಲ್ ಭಾಗದ ಸ್ಥಳೀಯ ಬಸ್ಸುಗಳು, ಗೋವಾ-ಪಣಜಿ, ಕಾರವಾರ ಹೀಗೆ ಅಂತರ್ ಜಿಲ್ಲೆ, ಹೊರ ರಾಜ್ಯಗಳಿಗೆ ತೆರಳುವ ಪ್ರತಿಯೊಂದು ಬಸ್ಸು ಇಲ್ಲಿಗೆ ಬಂದು ಹೋಗುತ್ತದೆ. ಹತ್ತಾರು ಬಸ್ಸುಗಳ ಸಂಚಾರದ ಜತೆಗೆ ಸಾವಿರಾರು ಪ್ರಯಾಣಿಕರು ಭೇಟಿ ನೀಡುತ್ತಾರೆ. ಹಾಗಿದ್ದರೂ ಇದರ ಅಭಿವೃದ್ಧಿಗೆ ಯಾರೂ ಮುಂದಾಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಸ್ಥಳೀಯರಾದ ಮೋಹನ ನಾಯ್ಕ ಮಾತನಾಡಿ, ಎನ್.ಡಬ್ಲ್ಯು.ಕೆ.ಆರ್.ಟಿ.ಸಿ ಅಡಿಯಲ್ಲಿ ಈ ಬಸ್ ನಿಲ್ದಾಣ ಕಾರ್ಯನಿರ್ವಹಣೆ ಮಾಡುತ್ತಿದೆ. ಬಸ್ ನಿಲ್ದಾಣದ ಒಳಗೂ ಹೊಂಡ, ಗುಂಡಿಗಳು ನಿರ್ಮಾಣವಾಗಿದ್ದು, ಗಣೇಶ ನಗರ ಭಾಗದಿಂದ ಒಳ ಹೋಗುವ ನಗರಸಭಾ ವ್ಯಾಪ್ತಿಯ ಜಾಗದಲ್ಲಿ ಪಾತಾಳವೇ ಸೃಷ್ಟಿಯಾಗಿದೆ. ಕಾರಣ ಇಲ್ಲಿಂದ ಓಡಾಡುವ ರಿಕ್ಷಾ, ಕಾರುಗಳು, ದ್ವಿಚಕ್ರ ವಾಹನ ಸವಾರರಿಗೂ ತೊಂದರೆಯಾಗಿದೆ. ಬಸ್ ಈ ಹೊಂಡ ಇಳಿದರೆ ದರ ಕೆಳ ಭಾಗ ನೆಲಕ್ಕೆ ಬಡಿಯುತ್ತದೆ. ಇಷ್ಟಾದರೂ ಹೊಂಡ ಮುಚ್ಚುವ ಕಾರ್ಯ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಗರಸಭೆಯನ್ನು ಕೇಳಿದರೆ ಸಾರಿಗೆ ಇಲಾಖೆಯತ್ತ, ಸಾರಿಗೆ ಇಲಾಖೆಯನ್ನು ಕೇಳಿದರೆ ನಗರಸಭೆಯತ್ತ ಬೊಟ್ಟು ಮಾಡುತ್ತ ಕಾಲಹರಣ ಮಾಡಲಾಗುತ್ತಿದೆ. ತ್ವರಿತವಾಗಿ ದುರಸ್ತಿ ಕಾರ್ಯ ಮಾಡದಿದ್ದರೆ ಪ್ರತಿಭಟನೆ ನಡೆಸಲಗುವುದು’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.