ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿ ಕುಟುಂಬಕ್ಕೆ ಆದಾಯ ಪತ್ರಿಕೆ ಅಗತ್ಯ: ಆರ್.ಎಂ.ಹೆಗಡೆ ಬಾಳೆಸರ

Published : 21 ಆಗಸ್ಟ್ 2024, 13:57 IST
Last Updated : 21 ಆಗಸ್ಟ್ 2024, 13:57 IST
ಫಾಲೋ ಮಾಡಿ
Comments

ಶಿರಸಿ: ‘ಸಹಕಾರಿ ಸಂಸ್ಥೆಯ ಸದಸ್ಯರು ತಮ್ಮ ಕುಟುಂಬಕ್ಕೆ ಪೂರಕವಾಗಿ ವೆಚ್ಚ ಮತ್ತು ಆದಾಯಗಳ ತುಲನಾತ್ಮಕ ಅಂದಾಜು ಪತ್ರಿಕೆಯನ್ನು ಹೊಂದಬೇಕು ಹಾಗೂ ಸಂಘದೊಂದಿಗೆ ನಿಷ್ಠೆಯಿಂದ ವ್ಯವಹರಿಸಬೇಕು’ ಎಂದು ಸಿದ್ದಾಪುರ ಟಿಎಂಎಸ್ ಸಹಕಾರಿ ಸಂಸ್ಥೆಯ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಹೇಳಿದರು.

ಸಿದ್ದಾಪುರ ಟಿಎಂಎಸ್‍ನಿಂದ ಶಿರಸಿ ಮಾರಾಟ ಮಳಿಗೆಯಲ್ಲಿ ಮಂಗಳವಾರ ನಡೆದ ಸಹಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಸ್ಥೆಯ ಹಿರಿಯ ಸದಸ್ಯರಾದ ಗಜಾನನ ಹಾಸ್ಯಗಾರ ಹುತ್ತಗಾರ, ಮಂಜುನಾಥ ಗೌಡ ಬತ್ಗೆರೆ, ಲಿಂಗ ಗೌಡ ಹುಕ್ಕಳಿ, ಗಂಗಾಧರ ಹೆಗಡೆ ಇಟ್ಲೋಣಿ, ಶಾಂತಾರಾಮ ಹೆಗಡೆ ಕಡಕಾರ, ಸತ್ಯನಾರಾಯಣ ಮಡಿವಾಳ ಡೊಂಬೆ, ಪಾರ್ವತಿ ಭಟ್ ಕಿಬ್ಬಳ್ಳಿ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ, ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈ ಹಾಗೂ ನಿರ್ದೇಶಕರು ಮತ್ತು ಸಲಹಾ ಸಮಿತಿ ಸದಸ್ಯರು ಇದ್ದರು. 

ನಿರ್ದೇಶಕ ಜಿ.ಎಂ.ಭಟ್ ಕಾಜಿನಮನೆ ಸ್ವಾಗತಿಸಿದರು. ಎಸ್.ಎಲ್.ಹೆಗಡೆ ಸಾಯಿಮನೆ ವಂದಿಸಿದರು. ಜಿ.ಜಿ.ಹೆಗಡೆ ಬಾಳಗೋಡ, ಶಾಖಾ ವ್ಯವಸ್ಥಾಪಕ ಪುರಂದರ ನಾಯ್ಕ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT