ಕಾರವಾರ: ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಜಿಲ್ಲೆಯ 68 ಕಡೆಗಳಲ್ಲಿ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದ್ದು, ಈ ಮತಗಟ್ಟೆಗಳ ಸಿಂಗಾರ ಜನಾಕರ್ಷಣೀಯವಾಗಿದೆ.

ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಸರಾಸರಿ 9 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿರುವ ಬುಡಕಟ್ಟು ಸಮುದಾಯಗಳಾದ ಸಿದ್ಧಿ, ಕುಣಬಿ, ಗೊಂಡ, ಹಾಲಕ್ಕಿಗಳು ಸೇರಿದಂತೆ ವಿವಿಧ ಸಂಪ್ರದಾಯಗಳನ್ನು ಪ್ರತಿ ಬಿಂಬಿಸುವ 16 ಸಾಂಪ್ರದಾಯಿಕ ಮತಗಟ್ಟೆ ತೆರೆಯಲಾಗಿದೆ.

ಭಟ್ಕಳದ ಕಿತ್ರೆ, ಹಳಿಯಾಳದ ಸಾಂಬ್ರಾಣಿ ಸೇರಿದಂತೆ ವಿವಿಧೆಡೆ ಸ್ಥಾಪಿಸಿದ ಮತಗಟ್ಟೆಗಳಲ್ಲಿ ಬುಡಕಟ್ಟು ಸಮುದಾಯಗಳು ಬಳಸುವ ಸಂಗೀತ ಪರಿಕರ, ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜತೆಗೆ ಈ ಮತಗಟ್ಟೆಗಳ ಗೋಡೆಗಳು, ಆವರಣಗೋಡೆಗಳ ಮೇಲಿನ ವರ್ಲಿ ಕಲೆ ಗಮನ ಸೆಳೆಯುತ್ತಿದೆ.

ಮಹಿಳಾ ಮತದಾರರು ಅಧಿಕವಾಗಿರುವ 25 ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆ ಎಂದು ಗುರುತಿಸಿ ಅಲ್ಲಿ ಮಹಿಳಾ ಸ್ನೇಹಿ ವ್ಯವಸ್ಥೆ ರೂಪಿಸಲಾಗಿದೆ. ಅಂಗವಿಕಲ ಸಿಬ್ಬಂದಿಯೇ ನಿರ್ವಹಿಸುವ 10 ಮತಗಟ್ಟೆಗಳು, ಯುವ ನೌಕರರಿಂದ ನಿರ್ವಹಿಸಲ್ಪಡುವ 17 ಯುವ ಮತಗಟ್ಟೆಗಳು ಸಿದ್ಧಗೊಂಡಿವೆ. ಇಲ್ಲಿ ಸೆಲ್ಫಿ ಪಾಯಿಂಟ್, ಮತದಾರರನ್ನು ಆಕರ್ಷಿಸಲು ಗೋಡೆ ಬರಹಗಳನ್ನು ಬರೆದು ಚಿತ್ತಾಕರ್ಷಕ ವ್ಯವಸ್ಥೆ ರೂಪಿಸಲಾಗಿದೆ.

- ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬ. ಜನರು ಸಂಭ್ರಮದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲು ವಿಶೇಷ ಮತಗಟ್ಟೆ ಸ್ಥಾಪಿಸಲಾಗುತ್ತಿದೆ.
- ಗಂಗೂಬಾಯಿ ಮಾನಕರ, ಜಿಲ್ಲಾ ಚುನಾವಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.