ಕಾರವಾರ: ಜಿಲ್ಲೆಯಲ್ಲಿ ಮೇ 7 ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿಗೆ ಉಪಯುಕ್ತ ವಸ್ತುಗಳನ್ನು ಒಳಗೊಂಡ ವಿಶೇಷ ಕಿಟ್ ಸಿದ್ದಗೊಂಡಿದೆ.

ಕೈಗಾದ ಅಣುವಿದ್ಯುತ್ ಕಾರ್ಪೊರೇಶನ್ ಇಂಡಿಯಾ ಲಿಮಿಟೆಡ್ (ಎನ್.ಪಿ.ಸಿ.ಐ.ಎಲ್) ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯ ಅಡಿಯಲ್ಲಿ ಈ ಕಿಟ್‍ಗಳನ್ನು ಪೂರೈಸಿದ್ದು, ಶನಿವಾರ ಸಿ.ಎಸ್.ಆರ್ ಯೋಜನೆಯ ಅಧಿಕಾರಿಗಳು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರಿಗೆ ಕಿಟ್‍ಗಳನ್ನು ಹಸ್ತಾಂತರಿಸಿದರು.

ಚುನಾವಣೆ ಕರ್ತವ್ಯಕ್ಕೆ ಮತಗಟ್ಟೆಗೆ ನಿಯೋಜನೆಗೊಳ್ಳಲಿರುವ ಪ್ರತಿ ಸಿಬ್ಬಂದಿಗೆ ನೀಡುವ ಕಿಟ್‍ನಲ್ಲಿ ದೈನಂದಿನ ಉಪಯೋಗಕ್ಕೆ ಬಳಸುವ ಟೂತ್ ಬ್ರಶ್, ಟೂತ್ ಪೇಸ್ಟ್, ಸೋಪು, ಬಾಚಣಿಗೆ, ಸ್ಯಾನಿಟೈಸರ್, ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಓಡೋಮಸ್ ಕ್ರೀಮ್ ಇರಲಿದೆ. ಒಟ್ಟು 7,500 ಕಿಟ್‍ಗಳನ್ನು ಸಿದ್ಧಪಡಿಸಲಾಗಿದೆ.

‘ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ, ದೈನಂದಿನ ಉಪಯೋಗಕ್ಕೆ ಅಗತ್ಯವಿರುವ ಕಿಟ್‍ಗಳನ್ನು ನೀಡಲಾಗುತ್ತಿದೆ. ಈ ಕಿಟ್‌ನಲ್ಲಿನ ವಸ್ತುಗಳ ಬಳಕೆಯಿಂದ ಸಿಬ್ಬಂದಿ ಮತದಾನದ ದಿನ ಇನ್ನಷ್ಟು ಹೆಚ್ಚು ಲವಲವಿಕೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಬಹುದು ಎಂಬ ವಿಶ್ವಾಸವಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೈಗಾ ಸಂಸ್ಥೆಯ ಸಿ.ಎಸ್.ಆರ್ ಫಂಡ್ ಯೋಜನೆಯ ಸದಸ್ಯ ಕಾರ್ಯದರ್ಶಿ ಆಶೀಶ್ ಲಾಲ್, ಸದಸ್ಯ ದಿನೇಶ್ ಗಾಂವಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.