ಭಾನುವಾರ, ಏಪ್ರಿಲ್ 2, 2023
23 °C

ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ ತೆಲುಗು ನಟ ಅಖಿಲ್ ರಾಜ್ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕರ್ಣ: ಇಲ್ಲಿಯ ಕುಡ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಮುದ್ರದಲ್ಲಿ ಈಜಾಡಲು ತೆರಳಿ, ಅಲೆಯ ರಭಸಕ್ಕೆ ಕೊಚ್ಚಿಹೋಗುತ್ತಿದ್ದ ತೆಲುಗು ನಟರೊಬ್ಬರನ್ನು ರಕ್ಷಿಸಲಾಗಿದೆ.

ಹೈದರಾಬಾದಿನ ಅಖಿಲ್ ರಾಜ್ (26) ರಕ್ಷಿಸಲಾದ ನಟ. ಅವರು ತಮ್ಮ ಗೆಳೆಯರ ಜೊತೆ ಗೋಕರ್ಣಕ್ಕೆ ಬಂದಿದ್ದರು. ಇಲ್ಲಿಯ ಕುಡ್ಲೆ ಕಡಲತೀರದಲ್ಲಿರುವ ಖಾಸಗಿ ರೆಸಾರ್ಟಿನಲ್ಲಿ ಉಳಿದುಕೊಂಡಿದ್ದರು.

ಅಲೆಯ ರಭಸಕ್ಕೆ ಮುಳುಗುತ್ತಿರುವುದನ್ನು ಗಮನಿಸಿದ ಮಿಸ್ಟಿಕ್ ಗೋಕರ್ಣ ಎಡ್ವೆಂಚಸ್ಟ್ ತಂಡದ ಸಿಬ್ಬಂದಿ ಸ್ಪೀಡ್ ಬೋಟ್ ಮೂಲಕ ಅವರನ್ನು ದಡಕ್ಕೆ ಎಳೆತಂದು ರಕ್ಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಆದಿತ್ಯ ಹರಿಕಾಂತ, ಶೇಖರ್ ಹರಿಕಾಂತ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು