ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯ ನಾಗಪ್ಪ ದೊಡ್ಡರಾಮಣ ಕೊರಚರ, ಅವಿನಾಶ ಕೊಟ್ರೇಶ ಕೊರಚರ, ನಿಸ್ಸಾರ್ ಅಹ್ಮದ್ ಮಹಮ್ಮದ್ ಜಾಫರ್ ಬಳಗಾರ, ಸಂಜೀವ ಕೆ.ಆರ್. ರಾಮಣ್ಣ ಕೊರಚರ ಹಾಗೂ ಶಿಕಾರಿಪುರ ಮಲೇನಹಳ್ಳಿ ತಾಂಡಾದ ಕೃಷ್ಣಪ್ಪ ನಾಯ್ಕ ಅವರನ್ನು ಬಂಧಿಸಲಾಗಿದ್ದು, ಇವರಿಂದ ₹7,63,000 ಹಣ ಹಾಗೂ 3 ಮೋಟಾರ್ ಸೈಕಲ್ ವಾಹನವನ್ನು ಜಪ್ತು ಮಾಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಗುರುವಾರ ಶಿರಸಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.