ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ: ಪತ್ರಕರ್ತರ ಹೆಸರಿನಲ್ಲಿ ಸುಲಿಗೆ ಯತ್ನ

Published 25 ಏಪ್ರಿಲ್ 2024, 14:26 IST
Last Updated 25 ಏಪ್ರಿಲ್ 2024, 14:26 IST
ಅಕ್ಷರ ಗಾತ್ರ

ದಾಂಡೇಲಿ: ನಗರದ ಹೋಟೆಲ್‌ಗೆ ನುಗ್ಗಿ ಬೆದರಿಕೆ ಹಾಕಿದ ಹುಬ್ಬಳ್ಳಿ ಮೂಲದ ಮೂವರು ಪತ್ರಕರ್ತರನ್ನು ದಾಂಡೇಲಿಯ ಪತ್ರಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. 

'ನಾವು ಹುಬ್ಬಳ್ಳಿಯಿಂದ ಬಂದಿದ್ದೇವೆ. ನಮ್ಮದು ರಾಜ್ಯಮಟ್ಟದ ವಾರಪತ್ರಿಕೆ, ರಾಜ್ಯಮಟ್ಟದ ವರದಿಗಾರರು ಎನ್ನುತ್ತಾ ದಾಂಡೇಲಿಯ ಶೆಟ್ಟಿ ಲಂಚ್ ಹೋಮ್‌ನ್ನು ಅಕ್ರಮವಾಗಿ ಪ್ರವೇಶಿಸಿದ ಹುಬ್ಬಳ್ಳಿಯ ಬೈರಿದೇವರ ಕೊಪ್ಪದ ಲಕ್ಷ್ಮಣ ಪ್ರೇಮ ರೋಕಾ, ಮಂಜುನಾಥ ಚಂದ್ರಶೇಖರ ಚೌವ್ಹಾಣ್, ಹಳೆ ಹುಬ್ಬಳ್ಳಿಯ ಸಂತೋಷ ಮಡಿವಾಳಪ್ಪ ಕಲಮಾಕರ ಎಂಬ ಮೂವರು ವ್ಯಕ್ತಿಗಳು ನಿಮ್ಮ ಹೋಟೆಲ್‌ನ ಅಡುಗೆ ನೋಡಬೇಕು ಎಂದು ಹೋಟೆಲ್ ಸಿಬ್ಬಂದಿಗೆ ಹೇಳಿದ್ದಾರೆ.

ಆಗ ಹೋಟೆಲ್ ಸಿಬ್ಬಂದಿಗಳು ಮಾಲೀಕರು ಹೊರಗಡೆ ಹೋಗಿದ್ದಾರೆ ಎಂದಾಗ ಒಂದಿಷ್ಟು ಕಾಲ ಕಾದು ‘ಎಷ್ಟು ಹೊತ್ತು ನಿಮ್ಮ ಮಾಲೀಕರಿಗೆ ಕಾಯಬೇಕು. ಪತ್ರಕರ್ತರನ್ನು ಕಾಯಿಸಬಾರದೆಂದು ಗೊತ್ತಾಗುವುದಿಲ್ಲವೇ' ಎಂದು ಬೆದರಿಸಿದ್ದಾರೆ. ಆಗ ಅಲ್ಲಿಗೆ ಬಂದ ಹೋಟೆಲ್ ಮಾಲೀಕರು ‘ನಿಮ್ಮ ಐಡಿ ಕಾರ್ಡ್ ತೋರಿಸಿ’ ಎಂದಾಗ ಏರು ದನಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ 'ನಾವು ಮೀಡಿಯಾದವರು. ನಮ್ಮ ಐಡಿ ಕಾರ್ಡ್ ಕೇಳ್ತಿಯಾ' ಎಂದು ಅಕ್ರಮವಾಗಿ ನುಗ್ಗಲು ಪ್ರಯತ್ನಿಸಿದ್ದಾರೆ.

ಸ್ಥಳೀಯ ಪತ್ರಕರ್ತರು ಸ್ಥಳಕ್ಕೆ ಬಂದು, ಅವರನ್ನು ವಿಚಾರಿಸಿದಾಗ ಅವರು ನಕಲಿ ಪತ್ರಕರ್ತರು ಎಂದು ತಿಳಿದು ಬಂದಿತು. ದಾಂಡೇಲಿ ನಗರ ಠಾಣೆಯ ಪಿಎಸ್‌ಐ ಐ.ಆರ್.ಗಡ್ಡೇಕರ್‌ ಸ್ಥಳಕ್ಕೆ ಆಗಮಿಸಿ, ಪತ್ರಕರ್ತರನ್ನು ವಶಕ್ಕೆ ಪಡೆದು, ನಂತರ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT