ಮುಂಡಗೋಡ ತಾಲ್ಲೂಕಿನ ಯರೇಬೈಲ್ ಸನಿಹದ ಬೇಡ್ತಿ ಹಳ್ಳದಿಂದ ನೀರು ಎತ್ತಲು ನಿರ್ಮಿಸಿರುವ ಪಂಪ್‌ಹೌಸ್
ಹಳಿಯಾಳ ತಾಲ್ಲೂಕಿನ ಮಾಗವಾಡ ರಸ್ತೆ ಹತ್ತಿರ ಕಾಳಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ಪೈಪ ಲೈನ್ ಅಳವಡಿಸುತ್ತಿರುವುದು
ಹಳಿಯಾಳ ತಾಲ್ಲೂಕಿನ ಮಾಗವಾಡ ಹವಗಿ ಕೂಡು ರಸ್ತೆಯ ಬಳಿ ಕಾಳಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ಅಳವಡಿಸಲು ಪೈಪ್‍ಗಳನ್ನು ರಸ್ತೆ ಬದಿಯಲ್ಲಿ ಇರಿಸಿರುವುದು

ಬನವಾಸಿ ಭಾಗದಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ನಿವಾರಿಸುವಂತೆ ದಶಕದ ಬೇಡಿಕೆಯ ಕಾರಣಕ್ಕೆ ನೂತನ ಗ್ರಿಡ್ ಸ್ಥಾಪಿಸಿದ್ದರೂ ವಿದ್ಯುತ್ ಸಂಪರ್ಕ ನೀಡಿಲ್ಲ. ಇದರಿಂದ ಏತ ನೀರಾವರಿ ಯೋಜನೆ ಸಾಕಾರಗೊಂಡರೂ ಪ್ರಯೋಜನಕ್ಕೆ ಬರುತ್ತಿಲ್ಲ
ಚಂದ್ರಶೇಖರ ಗೌಡರ್ ಬನವಾಸಿ ನಿವಾಸಿ
ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ರೈತರ ಗದ್ದೆಗಳಲ್ಲಿ ಕಾಲುವೆ ನಿರ್ಮಿಸಿ ಪೈಪ್‌ಗಳನ್ನು ಹಾಕಿದ್ದಾರೆ. ಈ ವರ್ಷ ಗದ್ದೆ ತೋಟಗಳಿಗೆ ನೀರಿನ ಅಭಾವ ಆಗುವ ಸಾಧ್ಯತೆ ಇದ್ದು ಇಂತಹ ಸಮಯದಲ್ಲಿ ಯೋಜನೆ ಸಾಕಾರಗೊಂಡಿದ್ದರೆ ಬಹಳ ಅನುಕೂಲ ಆಗುತ್ತಿತ್ತು
ಶಿವಕುಮಾರ ಪಾಟೀಲ ರೈತ
ಗುತ್ತಿಗೆದಾರರ ವಿಳಂಬದಿಂದ ಕಾಮಗಾರಿ ತಡವಾಗಿದೆ. ಯೋಜನೆ ಮುಕ್ತಾಯಕ್ಕೆ ಅನುದಾನದ ಕೊರತೆಯಿಲ್ಲ. ಬಜೆಟ್‌ನಲ್ಲಿ ಮುಂದುವರೆದ ಕಾಮಗಾರಿಗೆ ಅಗತ್ಯಕ್ಕೆ ತಕ್ಕಂತೆ ಹಣ ನೀಡಲಾಗಿದೆ. ಈ ವರ್ಷದ ಅಂತ್ಯದೊಳಗೆ ಯೋಜನೆ ಉದ್ಘಾಟನೆಯಾಗಲಿದೆ
ಶಿವರಾಮ ಹೆಬ್ಬಾರ ಶಾಸಕ
- ಹುಲಗೋಡು ಗ್ರಾಮದಲ್ಲಿ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿದ್ದು ಆದಷ್ಟು ಶೀಘ್ರ ಈ ಯೋಜನೆ ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು
ನರಸಿಂಹ ಭಾಗ್ವತ ಹಲಗೋಡು ಕೃಷಿಕ