ಗೋಕರ್ಣ: ಇಲ್ಲಿನ ಮಹಾಬಲೇಶ್ವರ ದೇವಾಲಯದ ಆನುವಂಶೀಯ ಉಪಾಧಿವಂತ ಮಂಡಲದ ವತಿಯಿಂದ ಯುಗಾದಿಯಿಂದ ಯುಗಾದಿವರೆಗಿನ ವಿಶ್ವಾವಸು ಸಂವತ್ಸರದ ಪಂಚಾಂಗದ ಕ್ಯಾಲೆಂಡರ್ ಅನ್ನು ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿ ಮಂಗಳವಾರ ಶೃಂಗೇರಿಯ ಗುರು ನಿವಾಸದಲ್ಲಿ ಬಿಡುಗಡೆ ಮಾಡಿದರು.

‘ಕ್ಯಾಲೆಂಡರ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ದಿನ, ತಿಥಿ, ನಕ್ಷತ್ರ, ಯೋಗ, ಕರ್ಣವನ್ನುಇಂಗ್ಲಿಷ್ ದಿನಾಂಕದೊಂದಿಗೆ ಸಂಯೋಜಿಸಲಾಗಿದೆ. ಪ್ರತಿಯೊಬ್ಬರಿಗೂ ಸರಳವಾಗಿ ಅರ್ಥವಾಗುವಂತೆ ರೂಪಿಸಲಾಗಿದೆ’ ಎಂದು ಗೋಕರ್ಣದ ಆನುವಂಶೀಯ ಉಪಾಧಿವಂತ ಮಂಡಲದ ಅಧ್ಯಕ್ಷ ರಾಜಗೋಪಾಲ ಅಡಿ ತಿಳಿಸಿದರು.

‘ಗ್ರಹಣಗಳು ಹಾಗೂ ವಿವಿಧ ಧಾರ್ಮಿಕ ಮಹತ್ವದ ದಿನಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವುದು ಈ ಕ್ಯಾಲೆಂಡರ್ನ ವಿಶೇಷ’ ಎಂದರು.

ಮಂಡಲದ ಉಪಾಧ್ಯಕ್ಷ ಗುರುದತ್ತ ಹಿರೇ, ಸಂಚಾಲಕ ಪ್ರಸನ್ನ ಜೊಗಭಟ್, ಸಹ ಕಾರ್ಯದರ್ಶಿ ಶಂಕರ ಪಣಿಭಟ್ ಗೋಪಿ, ಹಿರೇ ಹೊಸಬ ದೇವಸ್ಥಾನದ ಪ್ರಧಾನ ಅರ್ಚಕ ಪವನ ಗುನಗ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.