ಮುಂಡಗೋಡ ತಾಲ್ಲೂಕಿನ ಗಣೇಶಪುರ ಗ್ರಾಮದಲ್ಲಿ ತಳ್ಳುವ ಗಾಡಿಯಲ್ಲಿ ನೀರು ತರುತ್ತಿರುವ ಬಾಲಕಿ
ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಹಲವು ಗ್ರಾಮಗಳ ಪಟ್ಟಿಯನ್ನು ಈಗಲೇ ಸಿದ್ಧಪಡಿಸಲಾಗಿದ್ದು ಪರ್ಯಾಯ ಸಿದ್ಧತಾ ಕಾರ್ಯಕ್ಕೆ ಸಂಬಂಧಿಸಿದ ಪಿಡಿಒಗಳಿಗೆ ಸೂಚಿಸಲಾಗಿದೆ
ಟಿ.ವೈ.ದಾಸನಕೊಪ್ಪ ತಾಲ್ಲೂಕು ಪಂಚಾಯಿತಿ ಇಒ
ಪ್ರತಿ ವರ್ಷ ಶಾಶ್ವತ ಯೋಜನೆ ಜಾರಿಗೆ ಒತ್ತಾಯಿಸುತ್ತ ಬಂದರೂ ಇನ್ನೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಸರ್ಕಾರ ಯೋಜನೆ ಜಾರಿಗೆ ಅನುಮೋದನೆ ನೀಡಬೇಕು
ಗುಡ್ಡಪ್ಪ ಕಾತೂರ ವಕೀಲ
ಟ್ಯಾಂಕರ್ ನೀರು ಪೂರೈಕೆ
‘ತಾಲ್ಲೂಕಿನ ಮೈನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಕಿಕೇರಾ ಗೋದ್ನಾಳ ಮೈನಳ್ಳಿ ಶಿವಾಜಿ ನಗರದಲ್ಲಿ ಸದ್ಯ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಚವಡಳ್ಳಿ ಪಂಚಾಯಿತಿ ವ್ಯಾಪ್ತಿಯ ಚವಡಳ್ಳಿ ನಂದಿಕಟ್ಟಾ ಪಂಚಾಯಿತಿ ವ್ಯಾಪ್ತಿಯ ಹುಲಿಹೊಂಡ ಇಂದೂರ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ.ವೈ.ದಾಸನಕೊಪ್ಪ ಹೇಳಿದರು.