ಕಾರವಾರ: ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಮತ್ತು ಚಾರಣ ಚಟುವಟಿಕೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಕಾಳಿ ಹುಲಿ ಸಂರಕ್ಷಿತಾರಣ್ಯ (ಕೆಟಿಆರ್) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪ್ರವಾಸೋದ್ಯಮ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲು ಒತ್ತಾಯ ಹೆಚ್ಚಿದೆ.

ಕೆಲ ತಿಂಗಳುಗಳಿಂದ ಜೊಯಿಡಾದ ವಾಗೇಲಿ, ಡೇರಿಯಾ, ಹುಡಸಾ, ಪಟ್ಟೇಗಾಳಿ, ಅವೇಡಾ ಸೇರಿದಂತೆ ಹಲವೆಡೆ ಕರಡಿ ದಾಳಿ ಘಟನೆಗಳು ನಡೆದಿವೆ. ಗ್ರಾಮಗಳ ಮನೆಗಳಿಗೆ ಕರಡಿಗಳು ನುಗ್ಗುವ ಘಟನೆಗಳು ನಡೆಯುತ್ತಿವೆ. ಜನವಸತಿ ಪ್ರದೇಶಗಳ ಬಳಿ ಚಿರತೆ ಸೇರಿದಂತೆ ವನ್ಯಜೀವಿಗಳು ಕಾಣಿಸಿಕೊಳ್ಳುವುದು ಹೆಚ್ಚಿದೆ.

‘ಕೆಟಿಆರ್ ವ್ಯಾಪ್ತಿಯಲ್ಲಿ ಹುಲಿ ಮನುಷ್ಯರ ಮೇಲೆ ದಾಳಿ ನಡೆಸಿದ ಘಟನೆಗಳು ಈವರೆಗೆ ನಡೆಯದಿದ್ದರೂ ಇತರ ವನ್ಯಜೀವಿಗಳು ಜನವಸತಿ ಪ್ರದೇಶದತ್ತ ನುಗ್ಗುವ ಘಟನೆ ಈಚಿನ ವರ್ಷದಲ್ಲಿ ಹೆಚ್ಚಿದೆ. ಅದರಲ್ಲಿಯೂ ಕರಡಿ ದಾಳಿ ಹೆಚ್ಚುತ್ತಿದೆ. ಕೆಟಿಆರ್ ಹೊರವಲಯದಲ್ಲಿ ರೆಸಾರ್ಟ್, ಹೋಮ್ ಸ್ಟೇಗಳ ಸಂಖ್ಯೆ ಮಿತಿಮೀರುತ್ತಿದೆ. ಅಲ್ಲಿಗೆ ಬರುವ ಪ್ರವಾಸಿಗರು ಕೆಟಿಆರ್ನಲ್ಲಿ ನಡೆಯುವ ಸಫಾರಿ, ಚಾರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೆಲವರು ಅಕ್ರಮವಾಗಿ ಕಾಡಿನಲ್ಲಿ ಮೋಜುಮಸ್ತಿ ನಡೆಸುತ್ತಿದ್ದಾರೆ. ಇದರಿಂದ ವನ್ಯಜೀವಿಗಳಿಗೆ ಅಡ್ಡಿಯಾಗುತ್ತಿರುವುದು ಇಂತಹ ದಾಳಿಗೆ ಕಾರಣವಾಗುತ್ತಿದೆ’ ಎಂದು ಅವೇಡಾ ಗ್ರಾಮಸ್ಥರೊಬ್ಬರು ದೂರಿದರು.

‘ಹುಲಿ ಮೀಸಲು ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಕಾಮಗಾರಿ ಕೈಗೊಳ್ಳಲು ಅದು ಹುಲಿ ಸಂರಕ್ಷಣಾ ಯೋಜನೆಯಲ್ಲಿ ಉಲ್ಲೇಖಗೊಂಡಿರಬೇಕು ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ಟಿಸಿಎ) ಅನುಮತಿ ಪಡೆಯುವುದು ಕಡ್ಡಾಯ. ಆದರೆ ಕೆಟಿಆರ್ ವ್ಯಾಪ್ತಿಯಲ್ಲಿ ಈ ಕಾನೂನು ಕ್ರಮಗಳನ್ನು ಬದಿಗೊತ್ತಿ ಅನಧಿಕೃತ ಸಫಾರಿ, ಚಾರಣ ಹಾಗೂ ಕಾಮಗಾರಿಗಳು ನಡೆದಿದ್ದು, ವನ್ಯಜೀವಿಗಳ ನೆಮ್ಮದಿ ಹಾಳಾಗಿದೆ’ ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರೊಬ್ಬರು ದೂರಿದರು.

‘ಎನ್ಟಿಸಿಎ ಪ್ರಕಾರ ಕುಳಗಿ ಮತ್ತು ಫಣಸೋಲಿ ವನ್ಯಜೀವಿ ವಲಯಗಳಲ್ಲಿ ಮಾತ್ರ ಅಧಿಕೃತ ಜಂಗಲ್ ಸಫಾರಿಗೆ ಅವಕಾಶವಿದ್ದು, ಕುಳಗಿ ಮತ್ತು ಕ್ಯಾಸಲ್ರಾಕ್ ಸುತ್ತಮುತ್ತ ನಿಯಮಾವಳಿ ಉಲ್ಲಂಘಿಸಿ ಸಫಾರಿ ನಡೆಯುತ್ತಿದೆ’ ಎಂದು ದೂರಿದರು.

‘ಕ್ಯಾಸಲ್ ರಾಕ್, ದೂಧಸಾಗರ್ ಟಾಪ್, ಪೋಪುಲವಾಡಿ ಜಲಪಾತ ಮಾರ್ಗದಲ್ಲಿ ಅನುಮತಿ ಇಲ್ಲದೆ ಚಾರಣ ನಡೆಸಲಾಗಿದೆ. ಕಾಳಿ ಹಿನ್ನೀರಿನಲ್ಲಿ ಅಧಿಕಾರ ವ್ಯಾಪ್ತಿ ಮೀರಿ ಅಕ್ರಮ ಬೋಟ್ ಸಫಾರಿ ನಡೆಸಲಾಗುತ್ತಿದೆ. ಹುಲಿ ಸಂರಕ್ಷಣಾ ಯೋಜನೆಯಹೊಸ ಕರಡು ಪ್ರಸ್ತಾವನೆಯಲ್ಲಿ ಒಟ್ಟು 39 ಚಾರಣ ಪಥ ಸೇರಿದಂತೆ ಅರಣ್ಯವಾಸಿಗಳು ಸ್ಥಳಾಂತರಗೊಂಡು ಬಿಟ್ಟು ಹೋದ ಸ್ಥಳಗಳಲ್ಲಿಯೂ ಹೊಸ ಚಾರಣ ಮಾರ್ಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ದೂರಿದರು.

ಕೆಟಿಆರ್ ವ್ಯಾಪ್ತಿಯಲ್ಲಿ ವನ್ಯಜೀವಿಗಳಿಗೆ ತೊಂದರೆಯಾಗುವಂತ ಯಾವುದೇ ಹೊಸ ಚಾರಣಪಥಕ್ಕೆ ಪ್ರಸ್ತಾವ ಇಲ್ಲ. ಕಾನೂನುಬದ್ಧವಾಗಿಯೇ ಸಫಾರಿ ನಡೆಯುತ್ತಿದೆ
ನೀಲೇಶ್ ಶಿಂಧೆ ಕೆಟಿಆರ್ ಡಿಸಿಎಫ್

ಅರಣ್ಯವಾಸಿಗಳನ್ನು ಸ್ಥಳಾಂತರಗೊಳಿಸಿದ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಕೈಗೊಳ್ಳಲು ಕಾನೂನಿನಲ್ಲಿ ಅವಕಶವಿಲ್ಲ. ಇದು ನೈತಿಕ ನೆಲೆಯಲ್ಲೂ ತಪ್ಪು
ಗಿರಿಧರ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ

ಹೆಚ್ಚುತ್ತಿರುವ ಡ್ರೋನ್ ಹಾರಾಟ

‘ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಡ್ರೋನ್ ಬಳಕೆ ಹೆಚ್ಚುತ್ತಿದೆ. ಅದರಲ್ಲಿಯೂ ಶಿವಪುರ ತೂಗುಸೇತುವೆ ಅದರ ಸುತ್ತಮುತ್ತ ಡ್ರೋನ್ ಬಳಸಿ ಸೆರೆಹಿಡಿದ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗುತ್ತಿದೆ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ’ ಎಂಬುದು ವನ್ಯಜೀವಿ ಸಂರಕ್ಷಣಾವಾದಿಗಳ ಆರೋಪ. ‘ಡ್ರೋನ್ಗಳ ಹಾರಾಟ ಸದ್ದು ಸೂಕ್ಷ್ಮ ವನ್ಯಜೀವಿಗಳಿಗೆ ಕಿರಿಕಿರಿ ಉಂಟುಮಾಡುತ್ತವೆ. ಡ್ರೋನ್ ಮೂಲಕ ಸೆರೆಹಿಡಿಯುವ ದೃಶ್ಯಗಳು ಬೇಟೆಗಾರರಿಗೆ ದಾರಿ ತೋರಿಸಿಕೊಡಬಹುದು. ನಿಯಮ ಮೀರಿ ಡ್ರೋನ್ ಚಿತರೀಕರಣ ನಡೆಸಿದರೂ ಅರಣ್ಯಾಧಿಕಾರಿಗಳು ಕ್ರಮವಹಿಸದಿರುವುದು ದುರಂತ’ ಎಂದು ಅವರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.