‘ಸೈದ್ಧಾಂತಿಕ ನಿಲುವು ಇದ್ದರೆ ಪಕ್ಷದ ಸಂಘಟನೆಗೆ ಒಳಿತು. ಆದರೆ, ವೈಯಕ್ತಿಕ ನಿಲುವು ಹೆಚ್ಚಾದರೆ ಸಂಕಷ್ಟ ಖಚಿತ. ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ಕರ್ನಾಟಕದಲ್ಲಿ ಆಗಿದ್ದೇನು? ಹೀಗಾಗಿ ಪಕ್ಷದೊಳಗೆ ಶುದ್ಧೀಕರಿಸುವ ಹಿನ್ನೆಲೆಯಲ್ಲಿ ಹೊರ ಬಂದಿರುವೆ. ಶೀಘ್ರದಲ್ಲೇ ಈ ಬಗ್ಗೆ ಹಿರಿಯರ ಬಳಿ ಚರ್ಚಿಸಿ, ಸ್ವಚ್ಛತೆ ಬಳಿಕ ಮತ್ತೆ ಮಾತೃಪಕ್ಷಕ್ಕೆ ಮರಳುವೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.