ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗೆ ಹಳಿಯಾಳದ ಕುಸ್ತಿ ಪಟುಗಳು ಆಯ್ಕೆ

Published 26 ಜೂನ್ 2024, 13:51 IST
Last Updated 26 ಜೂನ್ 2024, 13:51 IST
ಅಕ್ಷರ ಗಾತ್ರ

ಹಳಿಯಾಳ: ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಗೆ ಹಳಿಯಾಳದ ಕ್ರೀಡಾ ವಸತಿ ನಿಲಯದ ಕುಸ್ತಿ ಪಟುಗಳು ಆಯ್ಕೆಯಾಗಿರುದ್ದಾರೆ.

ಜೂನ್‌ 28 ರಿಂದ 30ರ ವರೆಗೆ ತಮಿಳುನಾಡಿನ ಸೇಲಂನಲ್ಲಿ ನಡೆಯುವ ರಾಷ್ಟ್ರಮಟ್ಟದ ಹಾಗೂ ಸೌತ ಝೋನ ಕುಸ್ತಿ ಸ್ಪರ್ಧೆಗೆ 23 ವರ್ಷದೊಳಗಿನ ಮತ್ತು ಹಿರಿಯರ ವಿಭಾಗದಲ್ಲಿ ಕುಸ್ತಿ ಪಟುಗಳು ಭಾಗವಹಿಸಲ್ಲಿದ್ದಾರೆ. ರೋಹನ ದೊಡ್ಡನಿ 61 ಕೆ.ಜಿ, ಗಾಯತ್ರಿ ಸುತಾರ 62 ಕೆಜಿ, ಶ್ವೇತಾ ಅನ್ನಿಕೇರಿ 50 ಕೆಜಿ, ಪ್ರಿನ್ಸಿಟಾ ಸಿದ್ದಿ65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಜುಲೈ 5 ರಿಂದ 7ರ ವರೆಗೆ ಉತ್ತರಾಖಂಡ ರಾಜ್ಯದ ಉದಮ್‌ಸಿಂಗ ನಗರದಲ್ಲಿ ನಡೆಯಲಿರುವ 17 ವರ್ಷದೊಳಗಿನ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗೆ ನಿಂಗಪ್ಪಾ ಗಾಡೇಕರ 45 ಕೆಜಿ, ಮೋಹನ ಹಡಪದ 45 ಕೆಜಿ, ರಾಧಿಕಾ ಬಸ್ತವಾಡಕರ 49 ಕೆಜಿ, ಕಾವ್ಯಾ ದಾನವೆನ್ನವರ 53 ಕೆಜಿ, ಲಕ್ಷ್ಮಿ ಪಾಟೀಲ 65 ಕೆಜಿ, ಮನಿಷಾ ಸಿದ್ದಿ 73ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕುಸ್ತಿ ಪಟುಗಳಿಗೆ ರವಿ ನಾಯಿಕ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರವಾರ ಶ್ಲಾಘಿಸಿ ಇನ್ನು ಹೆಚ್ಚಿನ ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT