‘ಪೂರಕ ತರಬೇತಿ ಒದಗಿಸಲಿ’
‘ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳಿಲ್ಲ. ಸೀಮಿತ ಉದ್ಯೋಗಾವಕಾಶ ಇರುವ ಕಾರಣದಿಂದ ಉದ್ಯೋಗ ಸಿಗುತ್ತಿಲ್ಲ. ಫಲಾನುಭವಿಗಳಿಗೆ ಕೌಶಲ ತರಬೇತಿ ನೀಡುವುದಾದರೆ ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮ ಕ್ಷೇತ್ರಕ್ಕೆ, ನೌಕಾದಳದಲ್ಲಿ ಉದ್ಯೋಗ ಸಿಗಬಹುದಾದ ಕೋರ್ಸ್ ಪರಿಚಯಿಸಿ ತರಬೇತಿ ನೀಡಲಿ’ ಎಂದು ಯುವನಿಧಿ ಫಲಾನುಭವಿಯೊಬ್ಬರು ಒತ್ತಾಯಿಸಿದರು.
‘ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡಿ, ಜಿಲ್ಲೆಯಲ್ಲಿ ಉದ್ಯೋಗ ಪಡೆದವರು ಕಡಿಮೆ. ಪದವಿ, ಡಿಪ್ಲೊಮಾ ಮುಗಿಸಿ ಮಹಾನಗರಗಳಿಗೆ ವಲಸೆ ಹೋಗಲಾಗದ ಸ್ಥಿತಿಯಲ್ಲಿರುವವರಷ್ಟೇ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ. ಅಂತಹವರಿಗೆ ಪೂರಕ ಕೋರ್ಸ್ ಪರಿಚಯಿಸುವ ಬಗ್ಗೆ ಈಚೆಗೆ ನಡೆದ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.