ಜಿ.ಪಂ. ಉಪಾಧ್ಯಕ್ಷೆಯಾಗಿ ವೀಣಾಕುಮಾರಿ ಆಯ್ಕೆ

7

ಜಿ.ಪಂ. ಉಪಾಧ್ಯಕ್ಷೆಯಾಗಿ ವೀಣಾಕುಮಾರಿ ಆಯ್ಕೆ

Published:
Updated:
Deccan Herald

ರಾಮನಗರ: ಇಲ್ಲಿನ ಜಿಲ್ಲಾ ಪಂಚಾಯಿತಿಯ ನೂತನ ಉಪಾಧ್ಯಕ್ಷೆಯಾಗಿ ಹೊಂಗನೂರು ಕ್ಷೇತ್ರದ ಸದಸ್ಯೆ ಜಿ.ಡಿ. ವೀಣಾಕುಮಾರಿ ಅವಿರೋಧವಾಗಿ ಆಯ್ಕೆಯಾದರು.

ನೂತನ ಉಪಾಧ್ಯಕ್ಷರ ಆಯ್ಕೆ ಚುನಾವಣೆಯು ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ನೇತೃತ್ವದಲ್ಲಿ ನಡೆಯಿತು. ಬೆಳಿಗ್ಗೆ 11ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಸಂದರ್ಭ ಜಿ.ಪಂ.ನ 22 ಸದಸ್ಯರ ಪೈಕಿ 12 ಸದಸ್ಯರು ಹಾಜರಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ವೀಣಾಕುಮಾರಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ನಂತರದಲ್ಲಿ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್‌. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೈ ಮುಹಿಲನ್‌ ಇದ್ದರು.

ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ವೀಣಾಕುಮಾರಿ ‘ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಕುಡಿಯುವ ನೀರು, ರಸ್ತೆ ಸೇರಿದಂತೆ ಜನರಿಗೆ ಅವಶ್ಯವಾದ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ. ಅಗತ್ಯಬಿದ್ದಲ್ಲಿ ಮುಖ್ಯಮಂತ್ರಿಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ಕೋರಿ ಮನವಿಯನ್ನೂ ಸಲ್ಲಿಸಲಾಗುವುದು’ ಎಂದರು.

ನೂತನ ಉಪಾಧ್ಯಕ್ಷರನ್ನು ಅಧ್ಯಕ್ಷ ಎಂ.ಎನ್.ನಾಗರಾಜು ಹಾಗೂ ಸಹ ಸದಸ್ಯರು ಅಭಿನಂದಿಸಿದರು.

ಬೆಂಬಲಿಗರ ಸಂಭ್ರಮ: ವೀಣಾಕುಮಾರಿ ಅವರ ಬೆಂಬಲಿಗರು ಜಿ.ಪಂ. ಭವನ ಹಾಗೂ ಉಪಾಧ್ಯಕ್ಷರ ಕಚೇರಿಗೆ ಬಾಳೆಕಂದು, ತೋರಣ ಕಟ್ಟಿ ಸಿಂಗರಿಸಿದ್ದರು. ಆಯ್ಕೆ ಪ್ರಕ್ರಿಯೆ ಮುಗಿಯುತ್ತಲೇ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಂದವರಿಗೆ ಬಿರಿಯಾನಿಯ ವಿತರಣೆಯೂ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !