ಹೊಸಪೇಟೆ (ವಿಜಯನಗರ): ನಗರದ ಥಿಯೊಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ಸೋಮವಾರ ಥಿಯೊಸಾಫಿಕಲ್ ಸೊಸೈಟಿ 150ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.

ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ರಾವ್ ಅವರು ಥಿಯೊಸಾಫಿಕಲ್ ಸೊಸೈಟಿಯ ತತ್ವಗಳು, ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. 1907ರಲ್ಲಿ ಅನಿಬೆಸೆಂಟ್ ಅಧ್ಯಕ್ಷರಾದ ನಂತರ ಭಾರತದಲ್ಲಿ ಇದು ಹೆಚ್ಚು ಜನಪ್ರಿಯವಾದುದನ್ನು ತಿಳಿಸಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಉಪಾಧ್ಯಕ್ಷ ಜಂಬಾನಳ್ಳಿ ಸತ್ಯನಾರಾಯಣ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರಾದ ವಿ.ಶರಣಪ್ಪ, ಡಿ.ಕೆ.ಕುಲಕರ್ಣಿ, ಖಜಾಂಚಿ ಕೆ.ಹನುಮಂತರಾವ್, ಸಂಚಾಲಕ ರಮೇಶ್ ದೇಶಪಾಂಡೆ, ಜಗದೀಶ ಪಿ.ಎಂ., ಪೂಜಾ ಇದ್ದರು. ಪ್ರಾಂಶುಪಾಲರಾದ ಪ್ರೊ. ಅನಸೂಯ ಅಂಗಡಿ ಅವರು ಸೊಸೈಟಿ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಸುಜಾತಾ ಡಿ.ಎನ್., ಅಮೃತ ಕುಮಾರ್ ಎಂ. ಸಹಕರಿಸಿದರು.

ಈಚೆಗೆ ನಿಧನರಾದ ಥಿಯೊಸಾಫಿಕಲ್ ಮಂಡಳಿಯ ನಿರ್ದೇಶಕ ಭೂಪಾಳ್ ರಾಘವೇಂದ್ರ ಶೆಟ್ಟಿ ಅವರಿಗೆ ಸಂತಾಪ ಸೂಚಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.