ಸೋಮವಾರ, ಆಗಸ್ಟ್ 2, 2021
21 °C

ಹೊಸಪೇಟೆ: ಒಂದೇ ದಿನ 16 ಜನ ಕೋವಿಡ್‌ನಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ ಕೋವಿಡ್‌–19ಗೆ 16 ಜನ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 656ಕ್ಕೆ ಏರಿಕೆಯಾಗಿದೆ.

ಭಾನುವಾರ ಇಡೀ ಜಿಲ್ಲೆಯಲ್ಲಿ 732 ಜನರಲ್ಲಿ ಸೋಂಕು ದೃಢಪಟ್ಟಿದೆ. ಬಳ್ಳಾರಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾದರೆ, ಹೊಸಪೇಟೆ, ಸಂಡೂರು ನಂತರದ ಸ್ಥಾನದಲ್ಲಿವೆ. ಬಳ್ಳಾರಿಯಲ್ಲಿ 391 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,734ಕ್ಕೆ ಏರಿಕೆಯಾಗಿದೆ. 227 ಜನ ಗುಣಮುಖರಾಗಿದ್ದಾರೆ.

ಹೊಸಪೇಟೆಯಲ್ಲಿ 112 ಜನರಲ್ಲಿ ಕೋವಿಡ್‌ ಖಚಿತವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 871ಕ್ಕೆ ಹೆಚ್ಚಾಗಿದೆ. ಸಂಡೂರಿನಲ್ಲಿ 72 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 700ಕ್ಕೆ ಏರಿಕೆ ಕಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು