ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಉದ್ಯೋಗ ಮೇಳದಲ್ಲಿ 174 ಮಂದಿಗೆ ನೌಕರಿ

Last Updated 17 ಫೆಬ್ರವರಿ 2023, 14:28 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಉಗಮದೇವಿ ಭವರಲಾಲ್ ನಾಹರ್ ಥಿಯೋಸಫಿಕಲ್ ಮಹಿಳಾ ಕಾಲೇಜು ಹಾಗೂ ಬಳ್ಳಾರಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 174 ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗೆ ಆಯ್ಕೆಯಾದರು.

ಒಟ್ಟು 1453 ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 174 ವಿದ್ಯಾರ್ಥಿಗಳನ್ನು ವಿವಿಧ ಕಂಪನಿಗಳು ಆಯ್ಕೆ ಮಾಡಿದ್ದು, ಇದರಲ್ಲಿ ಈಗಾಗಲೇ 64 ಮಂದಿ ಹೆಸರು ಅಂತಿಮಗೊಂಡಿದೆ. ಇದರಲ್ಲಿ 18 ಮಂದಿಗೆ ತಕ್ಷಣದಿಂದಲೇ ನೌಕರಿಗೆ ಸೇರುವಂತೆ ತಿಳಿಸಲಾಗಿದೆ. ಇನ್ನು, 26 ವಿದ್ಯಾರ್ಥಿಗಳು ತರಬೇತಿಗೆ ಆಯ್ಕೆಯಾಗಿದ್ದಾರೆ. ಒಟ್ಟು 18 ಕಂಪನಿಗಳವರು ಕ್ಯಾಂಪಸ್‌ ಸಂದರ್ಶನ ನಡೆಸಿದರು.

ಇದಕ್ಕೂ ಮುನ್ನ ಸಂಸ್ಥೆಯ ಉಪಾಧ್ಯಕ್ಷ ಭೂಪಾಳ ರಾಘವೇಂದ್ರ ಶೆಟ್ಟಿ ಉದ್ಘಾಟಿಸಿ, ಯುವಕರು ಉದ್ಯೋಗಕ್ಕಾಗಿ ಅರಸಿಕೊಂಡು ಹೋಗಬೇಕಿಲ್ಲ. ಅವರಿಗಾಗಿ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅನೇಕ ಕಂಪನಿಗಳವರು ಬಂದಿದ್ದಾರೆ. ತಮ್ಮ ಸಾಮರ್ಥ್ಯ, ಪ್ರತಿಭೆ ತೋರಿಸಿ ಆಯ್ಕೆಯಾಗಬೇಕು ಎಂದು ಹೇಳಿದರು.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಜಿಲ್ಲಾ ಉದ್ಯೋಗ ಅಧಿಕಾರಿ ಹಟ್ಟಪ್ಪ, ಸಂಸ್ಥೆ ಅಧ್ಯಕ್ಷ ಜಿ. ಭರಮಲಿಂಗನಗೌಡ, ಜಂಟಿ ಕಾರ್ಯದರ್ಶಿ ಕೆ.ಹನುಮಂತರಾವ್, ಕಾರ್ಯದರ್ಶಿ ಅಶೋಕ್ ಜೀರೆ, ಖಜಾಂಚಿ ಡಿ. ಪಾಂಡುರಂಗ ಶೆಟ್ಟಿ, ಸದಸ್ಯರಾದ ವಿ. ಶರಣಪ್ಪ, ಜಂಬಾನಹಳ್ಳಿ ಸತ್ಯನಾರಾಯಣ, ದೇಶಪಾಂಡೆ, ಪ್ರಹ್ಲಾದ್ ಭೂಪಾಳ್‌, ಪ್ರಾಚಾರ್ಯರಾದ ಸಂಗೀತಾ ಗಾಂವಕರ್‌, ಪಿ.ಎಂ. ಜಗದೀಶ್, ಮಂಜುನಾಥ ಇದ್ದರು. ಚೈತ್ರಾ, ಅನುಷಾ, ಅನಿತಾ ಪ್ರಾರ್ಥನಾ ಗೀತೆ ಹಾಡಿದರು. ಅನಸೂಯ ಅಂಗಡಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT