ಹೂವಿನಹಡಗಲಿ: ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘವು ವಾರ್ಷಿಕ ₹9.95 ಕೋಟಿ ವಹಿವಾಟು ನಡೆಸಿ,₹7.68 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಸವನಗೌಡ ಪಾಟೀಲ್ ಹೇಳಿದರು.
ಗುರುವಾರ ಸಂಘದ ಕಚೇರಿಯಲ್ಲಿ 40ನೇ ವಾರ್ಷಿಕ ಮಹಾಜನಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘2021ರಲ್ಲಿ ಸಂಘದಿಂದ ಬಿಡಿಪಿ ಯೋಜನೆ ಜಾರಿಗೊಳಿಸಿದ್ದು, ಪಿಗ್ಮಿ ಠೇವಣಿ ಆಧಾರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಸಂಘದಿಂದ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಮಾರಾಟ ಮತ್ತು ಸಗಟು ನಿಯಂತ್ರಿತ ಆಹಾರ ಧಾನ್ಯ ಮಾರಾಟ, ಇತರೆ ವಹಿವಾಟು ನಡೆಸಿ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ತಿಳಿಸಿದರು.
ವ್ಯವಸ್ಥಾಪಕ ಸೊಪ್ಪಿನ ವೀರಣ್ಣ ವರದಿ ವಾಚಿಸಿದರು. ಉಪಾಧ್ಯಕ್ಷ ನಾಗರಾಜನಾಯ್ಕ, ನಿರ್ದೇಶಕರಾದ ಬಿ.ಹನುಮಂತಪ್ಪ, ಢಾಕ್ಯಾನಾಯ್ಕ, ದೀಪದ ಕೃಷ್ಣಪ್ಪ, ಟಿ.ಮಹಾಂತೇಶ, ಜಿ.ಸೋಮಶೇಖರಸ್ವಾಮಿ, ಎ.ಜೆ.ವೀರೇಶ, ಈಟಿ ಹನುಮೇಶ, ಎಚ್.ಮಂಜುನಾಥ ಸುರೇಶ ಮಲ್ಕಿಒಡೆಯರ್, ಡಿ.ಕವಿತಾ, ಎಂ.ಸಂಧ್ಯಾ ಇದ್ದರು.