ಹೊಸಪೇಟೆ: ಇಲ್ಲಿನ ವಿಜಯನಗರ ಕಾಲೇಜ್ಗೆ ಗುರುವಾರ ಬಂದ ನಟ, ನಿರ್ಮಾಪಕ ಅಜಯ್ ರಾವ್, ತಾವು ಓದಿದ ಕಾಲೇಜು ದಿನಗಳ ಮೆಲುಕು ಹಾಕಿದರು.

‘ಚೆನ್ನಾಗಿ ಓದಿ ಪದವಿ ಪಡೆದು, ಯಾವುದಾದರೂ ವಿಷಯದಲ್ಲಿ ಪರಿಣತಿ ಪಡೆದುಕೊಳ್ಳಿ. ಉತ್ತಮ ನಾಗರಿಕರಾಗಿ ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ, ಬಳಿಕ ಶಾಲೆ, ಕಾಲೇಜು, ಊರಿಗೆ, ರಾಜ್ಯಕ್ಕೆ, ದೇಶಕ್ಕೆ ಏನಾದರೂ ಕೊಡುಗೆ ನೀಡಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಏನಾದರೂ ಆಗಿ, ಯಾರಿಗೂ ತೊಂದರೆ ಕೊಡಬೇಡಿ, ಸಾಧ್ಯವಿದ್ದಷ್ಟು ಒಳ್ಳೆಯದನ್ನು ಮಾಡಿ. ಶಿಸ್ತು ಕಲಿಯಿರಿ. ಈ ಕಾಲೇಜು ಅದನ್ನು ನನಗೆ ಕಲಿಸಿಕೊಟ್ಟಿದೆ. ಪ್ರಪಂಚದ ಯಾವುದೇ ದೇಶಕ್ಕೆ ಹೊದರೂ ಎಲ್ಲಾ ಕ್ಷೇತ್ರಗಳಲ್ಲೂ ವಿಜಯನಗರ ಕಾಲೇಜಿನ ವಿದ್ಯಾರ್ಥಿಗಳು ಸಿಗುತ್ತಾರೆ, ಅದು ಹೆಮ್ಮೆಯ ವಿಷಯವಾಗಿದೆ’ ಎಂದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್.ಮಲ್ಲಿಕಾರ್ಜುನ, ಪ್ರಾಂಶುಪಾಲ ಪ್ರೊ.ಪ್ರಭುಗೌಡ, ಪದವಿ ಕಾಲೇಜು ಪ್ರಾಂಶುಪಾಲ ಮಲ್ಲಿಕಾರ್ಜುನ ಗೌಡ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪಿ.ಎನ್. ಶ್ರೀಪಾದ, ಉಪಾಧ್ಯಕ್ಷರಾದ ಕೊರಿಶೆಟ್ಟ ಲಿಂಗಪ್ಪ, ಗೋಗ್ಗಾ ಚೆನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಕಾರ್ಯದರ್ಶಿ ಓಪ್ಪತ್ತೆಪ್ಪ, ಮಹಾವೀರ ಜೈನ್, ಕಿರಣ್ ಕುಮಾರ್, ವೀರಭದ್ರ ಸ್ವಾಮಿ, ಸುನಿಲ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.