ಹೊಸಪೇಟೆ (ವಿಜಯನಗರ): ಹಂಪಿ ಉತ್ಸವ ಪ್ರಯುಕ್ತ ಎಂ.ಪಿ.ಪ್ರಕಾಶ್ ಪ್ರಧಾನ ವೇದಿಕೆಯಲ್ಲಿ ಶನಿವಾರ ರಾತ್ರಿ ಉತ್ತರ ಕರ್ನಾಟಕದ ಗ್ರಾಮೀಣ ಗಾಯಕ ಬಾಳು ಬೆಳಗುಂದಿ ಪ್ರಸ್ತುತ ಪಡಿಸಿದ ವಿಕಟ ಗೀತೆಗಳಿಗೆ ನೆರದಿದ್ದ ಜನ ಕುಣಿದು ಕುಪ್ಪಳಿಸಿದರು.

ಆರಂಭದಲ್ಲಿ 'ಹುಟ್ಟಿದ ಊರಿಗೆ ಹ್ವಾದರೇ ಕಟ್ಟಿ ಬಡಿತಾರೆ', ನಂತರ ‘ಲಾವಣ್ಯ ಲಾವಣ್ಯ’ ಹಾಗೂ 'ಕುಣಿತಾಳೋ ಕುಣಿತಾಳೋ ಜಿಗಿತಾಳೋ ಜಿಂಕೆ ಜಗಿದಾಗೆ ಜಿಗಿತಾಳೋ' ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಉತ್ತರ ಕರ್ನಾಟಕ ಗಾಯಕಿ ಮಾಲಾಶ್ರೀ ಅವರು ಬಾಳು ಬೆಳಗುಂದಿಗೆ ಸಾಥ್ ನೀಡಿದರು.

‘ನೀವು ಆಶುಕವಿ, ಸ್ಥಳದಲ್ಲೇ ಕವಿತೆ ರಚಿಸಿ ಹಾಡುತ್ತೀರಿ, ಹಂಪಿಯ ಮೇಲೂ ಒಂದು ಕವನ ಬರೆದು ಇಲ್ಲೇ ಹಾಡಿ’ ಎಂದು ನಿರೂಪಕಿ ಸವಾಲು ಹಾಕಿದರು.

‘ಹಂಪಿ ಒಂದು ಐತಿಹಾಸಿಕ ಸ್ಥಳ, ಇದರ ಇತಿಹಾಸ ತಿಳಿದುಕೊಳ್ಳದೆ ಕವನ ರಚಿಸಲಾಗದು’ ಎಂದು ಹೇಳಿ ನಯವಾಗಿಯೇ ಈ ಒತ್ತಾಯವನ್ನು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.