ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದಾಖಲೆಯ ಗುರಿಯೊಂದಿಗೆ ಜಂಪ್‌ರೋಪ್‌ ಡಬಲ್‌ ಡಚ್‌ ಸ್ಪರ್ಧೆ ಆರಂಭ

Last Updated 29 ಜುಲೈ 2022, 16:31 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): 19ನೇ ರಾಷ್ಟ್ರೀಯ ಜಂಪ್‍ರೋಪ್‌ ‘ಡಬಲ್ ಡಚ್’ ಚಾಂಪಿಯನ್‌ಶಿಪ್‌ ಶುಕ್ರವಾರ ನಗರದಲ್ಲಿ ಆರಂಭಗೊಂಡಿತು.

ಶುಕ್ರವಾರ ಬೆಳಿಗ್ಗೆ 7ಕ್ಕೆ ಚಾಂಪಿಯನ್‌ಶಿಪ್‌ ಆರಂಭಗೊಂಡಿದ್ದು ಶನಿವಾರ (ಜು.30) ರಾತ್ರಿ 8ರ ವರೆಗೆ ನಿರಂತರವಾಗಿ ನಡೆಸಿ 36 ಗಂಟೆಗಳ ಹೊಸ ದಾಖಲೆ ಸೃಷ್ಟಿಸಲು ನಿರ್ಧರಿಸಲಾಗಿದೆ. 18 ರಾಜ್ಯಗಳ 160 ಮಕ್ಕಳು 24 ಗಂಟೆ ಇದುವರೆಗಿನ ವಿಶ್ವ ದಾಖಲೆ ಇದೆಎಂದು ಸಂಘಟಕರು ತಿಳಿಸಿದ್ದಾರೆ.

‘ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ದೇಶದ 18 ರಾಜ್ಯಗಳ 560 ಕ್ರೀಡಾಪಟುಗಳು ಜಂಪ್‍ರೋಪ್‍ ಕ್ರೀಡೆಯಲ್ಲಿ ಪಾಲ್ಗೊಂಡು ಅವರ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಡೆಮೊ ಪ್ರದರ್ಶನದೊಂದಿಗೆ ಕ್ರೀಡೆ ಆರಂಭಗೊಂಡಿದ್ದು, ಶನಿವಾರ ಮಧ್ಯಾಹ್ನದಿಂದ ಪದಕಗಳ ಪಟ್ಟಿ ಆರಂಭವಾಗಲಿದೆ’ ಎಂದು ಜಂಪ್‌ ರೋಪ್‌ ಫೆಡರೇಶನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‍ ರಜಾಕ್‌ ತಿಳಿಸಿದರು.

ಜಂಪ್‍ರೋಪ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ಜಂಪ್‍ರೋಪ್ ಅಸೋಸಿಯೇಷನ್‌, ವಿಕಾಸ ಬ್ಯಾಂಕ್ ಸಹಭಾಗಿತ್ವದಲ್ಲಿ ಚಾಂಪಿಯನ್‌ಶಿಪ್‌ ಹಮ್ಮಿಕೊಳ್ಳಲಾಗಿದೆ. ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಚಾಲನೆ ನೀಡಿದರು. ಫೆಡರೇಶನ್‌ ಸಹ ಕಾರ್ಯದರ್ಶಿ ಸಾಜೀದ್‍ಖಾನ್, ನಿರ್ದೇಶಕ ಅನಂತ ಜೋಶಿ, ಹಿರಿಯ ನಿರ್ದೇಶಕ ಅಶೋಕ ದುಗಾರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT