ಮಂಗಳವಾರ, ಮಾರ್ಚ್ 21, 2023
28 °C

ಉಚ್ಚಂಗಿದುರ್ಗ: ನಾಗತಿಕಟ್ಟೆ ತಾಂಡದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪ್ಪನಹಳ್ಳಿ: ಉಚ್ಚಂಗಿದುರ್ಗ ಸಮೀಪದ ನಾಗತಿಕಟ್ಟೆ ತಾಂಡದಲ್ಲಿ ಶನಿವಾರ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. 

ತಾಂಡದ ಯುವಕರು ಕಪ್ಪೆಗಳನ್ನು ತಂದು ಮದುವೆ ಹೆಣ್ಣು-ಗಂಡಿನಂತೆ ಶೃಂಗಾರ ಮಾಡಿ ಮದುವೆ ಮಾಡಲಾಯಿತು. ಬೇವಿನ ಉಡುಗೆ ತೊಟ್ಟ ಇಬ್ಬರು ಬಾಲಕರು ಕಪ್ಪೆಗಳನ್ನು ಕೋಲಿನ ಎರಡು ಬದಿಯಲ್ಲಿ ಕಟ್ಟಿಕೊಂಡು 'ಬಾರೋ ಬಾರೋ ಮಳೆರಾಯ, ಬಾಳೆಯ ತೋಟಕ್ಕೆ ನೀರಿಲ್ಲ...' ಎಂದು ಹಾಡುತ್ತಾ ಗ್ರಾಮದ ಮನೆ ಮನೆಗೆ ತೆರಳಿದರು.

ಇವರಿಗೆ ಯುವಕರ ತಂಡ ಸಹಕಾರ ನೀಡಿದರು. ಮನೆ ಮುಂದೆ ಬಂದ ನವ ವಿವಾಹಿತ ಕಪ್ಪೆಗಳಿಗೆ ನೀರು ಹಾಕಿ ಪೂಜೆ ಸಲ್ಲಿಸಿ, ಯುವಕರ ತಂಡಕ್ಕೆ ದೇಣಿಗೆ ರೂಪದಲ್ಲಿ ಹಣ, ಆಹಾರ ಪದಾರ್ಥಗಳನ್ನು ನೀಡಿ ಸಹಕರಿಸಿದರು. ಗ್ರಾಮದಲ್ಲಿ ಮೆರವಣಿಗೆ ಮುಗಿಸಿದ ಬಳಿಕ ಕಪ್ಪೆಗಳನ್ನು ಕೆರೆಯಲ್ಲಿ ವಿಸರ್ಜಿಸಲಾಯಿತು.

 

ಹೀಗೆ ಸಂಗ್ರಹವಾದ ಪದಾರ್ಥಗಳನ್ನು ಯುವಕರು ಗ್ರಾಮದ ಹೊರ ಭಾಗದಲ್ಲಿ ಒಂದೆಡೆ ಸೇರಿ ಅಡುಗೆ ತಾಯಾರಿಸಿ ಊಟ ಮಾಡಿದರು. ಕಪ್ಪೆಗಳ ಮದುವೆಯಿಂದ ಮಳೆಯಾಗುತ್ತದೆ ಎನ್ನುವ ನಂಬಿಕೆ ಈ ಭಾಗದ ಜನರಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು