ಬುಧವಾರ, ಮೇ 25, 2022
29 °C

ಹಗರಿಬೊಮ್ಮನಹಳ್ಳಿ | ಬ್ಯಾಟರಿ, ಕಾಪರ್ ವೈರ್ ಕಳವು: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ (ವಿಜಯನಗರ): ತಾಲ್ಲೂಕಿನ ಹಂಪಸಾಗರ ಗ್ರಾಮದ ರೈತ ತಟ್ಟಿ ಜಗದೀಶ್ ಅವರ ಜಮೀನಿನಲ್ಲಿ ಮೋಟಾರ್, ಸ್ಟಾರ್ಟರ್ ಮತ್ತು ವೈರ್ ಕಳ್ಳತನ ಮಾಡಿದ್ದ ಆರೋಪದ ಮೇರೆಗೆ ನಾಲ್ಕು ಜನ ಕಳ್ಳರನ್ನು ಭಾನುವಾರ ತಾಲ್ಲೂಕಿನ ತಂಬ್ರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹೂವಿನ ಹಡಗಲಿಯ ಹನುಮಂತಪ್ಪ ಕೊರವರ, ಹಂಪಸಾಗರ-3 ಗ್ರಾಮದ ಸುರೇಶ ಕೊರವರ,  ಭಜಂತ್ರಿ‌ಜಗದೀಶ, ಕೊಂಬಳಿಯ ಮಾರುತಿ ಬಂಧಿತರು. ಈ ಎಲ್ಲ‌ ಆರೋಪಿತರು ತಂಬ್ರಹಳ್ಳಿಯ ಠಾಣೆಯಲ್ಲಿ ಎರಡು,ಹೊಸಹಳ್ಳಿಯಲ್ಲಿ ಒಂದು, ಗುಡೇಕೋಟೆಯಲ್ಲಿ ಎರಡು, ಹರಪನಹಳ್ಳಿಯಲ್ಲಿ ಒಂದು ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. 

ಇವರೆಲ್ಲರೂ ಬ್ಯಾಟರಿಗಳನ್ನು ಕಳ್ಳತನ ಮಾಡಿ ಅವುಗಳನ್ನು ತುಂಡರಿಸಿ ಅದರಲ್ಲಿದ್ದ ಕಾಪರ್ ಮಾರಾಟ ಮಾಡುತ್ತಿದ್ದರು.

ಸಿಪಿಐ ಟಿ.ಮಂಜಣ್ಣ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಬಂಧಿತರಿಂದ ₹3.5ಲಕ್ಷ ನಗದು, 210 ಮೀಟರ್ ಉದ್ದದ ಕಾಪರ್ ವೈರ್ ಮತ್ತು ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು