ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾಂಬಿಕೆ ತೆಪ್ಪೋತ್ಸವ; ಮೆರವಣಿಗೆ

Published 29 ನವೆಂಬರ್ 2023, 13:13 IST
Last Updated 29 ನವೆಂಬರ್ 2023, 13:13 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹಂಪಸಾಗರ ಗ್ರಾಮದಲ್ಲಿ ಐತಿಹಾಸಿಕ ಗಂಗಾಂಬಿಕೆ ತೆಪ್ಪೋತ್ಸವ ಬುಧವಾರ ಸಡಗರ, ಸಂಭ್ರಮದಿಂದ ನಡೆಯಿತು.

ಗ್ರಾಮದ ಚೌಕಿ ಮನೆಯಲ್ಲಿ ಗಂಗಾಂಬಿಕೆ ಉತ್ಸವ ಮೂರ್ತಿ ಹೊಂದಿರುವ ಅಲಂಕೃತ ತೆಪ್ಪಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಧಾನ ಅರ್ಚಕ ಅಂಬಿಗರ ಪಾಲಾಕ್ಷಮ್ಮ ಸಾಂಪ್ರದಾಯಿಕ ಪೂಜೆ ನೆರವೇರಿಸಿದರು. ಬಳಿಕ ವಿವಿಧ ಕಲಾತಂಡಗಳ ಸಮ್ಮುಖದಲ್ಲಿ ಗ್ರಾಮದ ತುಂಗಭದ್ರಾ ನದಿ ಪಾತ್ರದವರೆಗೂ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯುದ್ದಕ್ಕೂ ಗಂಡಾರತಿಯನ್ನು ಮಹಿಳೆಯರು ಕಂಬಳಿ ಮತ್ತು ಮೊರಗಳಿಂದ ರಕ್ಷಿಸಿ, ನದಿ ದಂಡೆಗೆ ತಲುಪಿಸುವ ದೃಶ್ಯ ಗಮನ ಸೆಳೆಯಿತು. ಸುತ್ತಮುತ್ತಲಿನ ಗ್ರಾಮ ಹಾಗೂ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ತೆಪ್ಪೋತ್ಸವ ಕಣ್ತುಂಬಿಕೊಂಡರು.

ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮುಖಂಡರಾದ ಕರೆಂಗಿ ಸುಭಾಷ, ತಳವಾರ ವೆಂಕಟೇಶ, ತಟ್ಟಿ ಬ್ರಹ್ಮಾನಂದ, ಮಸ್ಕಿ ನಾಗರಾಜ, ಅಣ್ಣ ವೀರಪ್ಪ, ಅಂಬಿಗರ ಶಿವರಾಜ, ಅಂಬಿಗರ ಗಂಗಾಧರ, ಎಂ.ಎಂ.ವಿನಾಯಕ, ಅರ್ಲೂರ್ ಮಹಾಂತಪ್ಪ, ಸಿದ್ದಲಿಂಗಸ್ವಾಮಿ, ಬಿ.ಗೋಣೆಪ್ಪ ಅವರು ಉತ್ಸವದ ಉಸ್ತುವಾರಿ ವಹಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT