ಹೊಸಪೇಟೆ (ವಿಜಯುನಗರ): ಹಂಪಿಗೆ ಬಂದವರು ಸುಂದರ ನೆನಪಿನೊಂದಿಗೆ ವಾಪಸ್ ಹೋಗಬೇಕು, ಆದರೆ ಸದ್ಯ ವಿಜಯವಿಠ್ಠಲ ದೇವಸ್ಥಾನ, ಕಲ್ಲಿನ ರಥ ನೋಡಲು ಬಂದವರಿಗೆ ತಳವಾರಘಟ್ಟದ ವಾಹನ ನಿಲುಗಡೆ ಸ್ಥಳ ದುಃಸ್ವಪ್ನವಾಗಿ ಕಾಡುವ ಅಪಾಯ ಇದೆ.

ಮಳೆ ಬಂದಾಗಲೆಲ್ಲಾ ಈ ಪಾರ್ಕಿಂಗ್ ಜಾಗ ಅಕ್ಷರಶಃ ಕೆಸರು ಗದ್ದೆಯಂತೆಯೇ ಆಗುತ್ತಿದ್ದು, ಚಾಲಕರು, ಪ್ರಯಾಣಿಕರು ವಾಹನ ಇಳಿದು ಬರುವುದೇ ಒಂದು ಸಾಹಸವಾಗುತ್ತಿದೆ. ಕೆಲವು ದಿನಗಳ ಹಿಂದೆ ಸುರಿದಿದ್ದ ಮಳೆಯಿಂದ ಇದೇ ರೀತಿಯ ಸ್ಥಿತಿ ಇತ್ತು, ಮತ್ತೆ ಮಳೆ ಬಿಡುವು ಕೊಟ್ಟಿತ್ತು. ಶುಕ್ರವಾರ ರಾತ್ರಿ ಮತ್ತೆ ಮಳೆ ಸುರಿದ ಕಾರಣ ಶನಿವಾರ ಪ್ರವಾಸಿಗರು ತೊಂದರೆಗೆ ಸಿಲುಕಿದರು.

ವಿಜಯವಿಠ್ಠಲ ದೇವಸ್ಥಾನದತ್ತ ತೆರಳುವ ಮಣ್ಣಿನ ರಸ್ತೆಯಲ್ಲೂ ನೂರಾರು ಹೊಂಡಗಳು ಬಿದ್ದಿವೆ. ಅತ್ಯಂತ ಸೂಕ್ಷ್ಮ ತಂತ್ರಜ್ಞಾನದ ಬ್ಯಾಟರಿ ವಾಹನಗಳು ಈ ಹೊಂಡದಲ್ಲೇ ಸಾಗಬೇಕಿದ್ದು, 20 ವಾಹನಗಳ ಪೈಕಿ 11 ವಾಹನಗಳು ಈಗಾಗಲೇ ದುರಸ್ತಿಗೆ ಬಂದಿವೆ. ಸದ್ಯ 9 ಗಾಡಿಗಳಷ್ಟೇ ಸಂಚರಿಸುತ್ತಿವೆ. ಇದೆಲ್ಲದಕ್ಕೂ ಕಾರಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ನಿರ್ಲಕ್ಷ್ಯ ಎಂದು ಜನರು ಟೀಕಿಸುತ್ತಿದ್ದಾರೆ.

‘ಇಲ್ಲಿನ ಶೌಚಾಲಯದ ನಿರ್ವಹಣೆ ಸರಿ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ವಿಜಯವಿಠ್ಠಲ ದೇವಸ್ಥಾನದ ಬಳಿ ಸ್ಮಾರಕಗಳನ್ನು ನೋಡಿ, ದಣಿದು ಬಂದವರಿಗೆ ನೀರಿಲ್ಲ. ತಾತ್ಕಾಲಿಕ ಗಾಡಿಯಲ್ಲಿ ನೀರಿನ ಬಾಟಲಿಗಳನ್ನು ತಂದು ಇಡಲೂ ಅವಕಾಶ ನೀಡುತ್ತಿಲ್ಲ’ ಎಂದು ಹಲವು ಪ್ರವಾಸಿಗರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಇಟ್ಟಿಗೆ ಬೀಳುವ ಅಪಾಯ: ಎಎಸ್ಐ ತನ್ನ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವುದಕ್ಕೆ ಇನ್ನೊಂದು ಸಾಕ್ಷಿಯಾಗಿ, ವಿಜಯವಿಠ್ಠಲ ದೇವಸ್ಥಾನದ ದಕ್ಷಿಣ ಗೋಪುರದ ಇಟ್ಟಿಗೆಗಳು ಉದುರಿ ಬೀಳುತ್ತಿವೆ. ಕೆಲವು ದಿನಗಳಿಂದ ಗೋಪುರದ ದ್ವಾರವನ್ನು ಬಂದ್ ಮಾಡಲಾಗಿದೆ. ಹೀಗಾಗಿ ಕಲ್ಲಿನ ರಥ, ಸಂಗೀತ ಮಂಟಪ ನೋಡಿದ ಪ್ರವಾಸಿಗರು ಪೂರ್ವ ದ್ವಾರದಿಂದ ಸುತ್ತುಹಾಕಿ ಬರಬೇಕಾಗುತ್ತದೆ.

ಸದ್ಯ ಬ್ಯಾಟರಿ ವಾಹನಗಳ ನಿರ್ವಹಣೆಯಷ್ಟೇ ಹಂಪಿ ವಿಶ್ವಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ (ಹವಾಮ) ಸುಪರ್ದಿಯಲ್ಲಿದ್ದು, ಉಳಿದೆಲ್ಲವೂ ಎಎಸ್ಐ ನಿಯಂತ್ರಣದಲ್ಲೇ ಇದೆ. ಸಣ್ಣ ವಿಷಯಕ್ಕೂ ದೆಹಲಿಯಿಂದ ಅನುಮತಿ ಪಡೆದು ಮಾಡಬೇಕಾಗಿರುವುದರಿಂದ ನಿರ್ಧಾರ ಕೈಗೊಳ್ಳುವುದು ಬಹಳ ನಿಧಾನವಾಗುತ್ತಿದೆ.

ಪಾರ್ಕಿಂಗ್ ಸ್ಥಳದಲ್ಲಿನ ಸಮಸ್ಯೆ ಕುರಿತು ಪರಿಶೀಲಿಸಲಾಗುವುದು ಎಂದು ಎಎಸ್ಐ ಅಧೀಕ್ಷಕ ರಾಮಕೃಷ್ಣ ರೆಡ್ಡಿ ಪ್ರತಿಕ್ರಿಯಿಸಿದರು.

ಹಂತ ಹಂತವಾಗಿ 10 ಬ್ಯಾಟರಿ ವಾಹನಗಳ ದುರಸ್ತಿ ಆಗಲಿದೆ. ಇನ್ನೂ 10 ಬ್ಯಾಟರಿ ವಾಹನಗಳಿಗೆ ಕರೆಯಲಾದ ಟೆಂಡರ್ ಅಂತಿಮಗೊಂಡಿಲ್ಲ.
– ರಮೇಶ್ ವಟಗಲ್ ಆಯುಕ್ತ ಹವಾಮ

‘ಪಾರ್ಕಿಂಗ್ಗೆ ಕ್ರಮ ವಹಿಸಲಿ’

ತಳವಾರಘಟ್ಟದಲ್ಲಿ ಎಎಸ್ಐ ಪಾರ್ಕಿಂಗ್ ಸ್ಥಳದಲ್ಲಿ ಜಲ್ಲಿ ಮಣ್ಣು ಹಾಕಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಯನ್ನಂತೂ ಮಾಡುತ್ತಿಲ್ಲ. ಪಕ್ಕದಲ್ಲೇ ಖಾಸಗಿ ನಿವೇಶನ ಇದ್ದು ‘ಹವಾಮ’ ಅದನ್ನು ಖರೀದಿಸಿ ವಾಹನ ನಿಲುಗಡೆ ಸ್ಥಳ ಶೌಚಾಲಯ ಫುಡ್ಕೋರ್ಟ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಪ್ರವಾಸಿ ಮಾರ್ಗದರ್ಶಿ ಶ್ರೀನಿವಾಸ್ ಹೇಳಿದರು.

‘ಹಳಿ ನಿರ್ಮಿಸಿ ರೈಲು ಓಡಿಸಿ’

ತಳವಾರಘಟ್ಟದಿಂದ ವಿಜಯವಿಠ್ಠಲ ದೇವಸ್ಥಾನವರೆಗೆ ಒಂದು ಕಿ.ಮೀ.ಉದ್ದಕ್ಕೆ ರೈಲು ಹಳಿ ನಿರ್ಮಿಸಿ ಬ್ಯಾಟರಿ ಚಾಲಿತ ಪುಟಾಣಿ ರೈಲು ಓಡಿಸುವ ವ್ಯವಸ್ಥೆ ಬರಬೇಕು. ಅದು ಪರಿಸರ ಸ್ಮಾರಕಗಳ ರಕ್ಷಣೆ ಮಾಡುವುದಲ್ಲದೆ ಪ್ರವಾಸಿಗರಿಗೆ ಸಹ ಆಕರ್ಷಣೆ ಆಗಬಹುದು ಎಂದು ಹಲವು ಪ್ರವಾಸಿಗರು ಸಲಹೆ ನೀಡಿದರು. ಹೀಗೆ ಮಾಡಿದರೆ ಬ್ಯಾಟರಿ ವಾಹನಗಳನ್ನು ಉಗ್ರ ನರಸಿಂಹ ಅಥವಾ ರಾಣಿ ಸ್ನಾನಗೃಹದಿಂದ ತಳವಾರಘಟ್ಟದ ತನಕ ಓಡಿಸಬಹುದು ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.