ಶುಕ್ರವಾರ, ಮಾರ್ಚ್ 31, 2023
22 °C

ಹಂಪಿ ಉತ್ಸವಕ್ಕೆ ಫಲಪುಷ್ಪ ಪ್ರದರ್ಶನದ ಮೆರುಗು: ಹೂಗಳಲ್ಲಿ ಅರಳಿದ ಕಾಂತಾರ

ವಿಶ್ವನಾಥ ಡಿ. Updated:

ಅಕ್ಷರ ಗಾತ್ರ : | |

Prajavani

ಹಂಪಿ(ಹೊಸಪೇಟೆ): ಕಾಂತಾರ ಸಿನಿಮಾ ನೆನಪಿಸುವ ನಿಸರ್ಗ ದೇವ ಭೂತಕೋಲ, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ ಹೂಗಳಲ್ಲಿ ಅರಳಿದರೆ ಹೇಗಿರುತ್ತದೆ?

ಅದನ್ನು ನೋಡಬೇಕೆಂದರೆ ನೀವು ಹಂಪಿಗೆ ಭೇಟಿ ಕೊಡಬೇಕು. ಹಂಪಿ‌ ಉತ್ಸವದ ಅಂಗವಾಗಿ ಹಂಪಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನವು ಹತ್ತು ಹಲವು ಕಾರಣಗಳಿಗಾಗಿ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಮಹಿಳೆಯರು, ಮಕ್ಕಳೆನ್ನದೆ ಎಲ್ಲಾ ವಯೋಮಾನದವರು ಬಂದು ಹೂಗಳಲ್ಲಿ ಅರಳಿದ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ಗಾನಯೋಗಿ ಪಂಡಿತ್‌ ಪುಟ್ಟರಾಜ ಪಂಚಾಕ್ಷರಿ ಗವಾಯಿ, ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ, ಕಾಯಕಯೋಗಿ ತುಮಕೂರಿನ ಶಿವಕುಮಾರ ಶ್ರೀಗಳು, ರಂಗೋಲಿಯಲ್ಲಿ ಅರಳಿದ್ದಾರೆ. ಹಳದಿ, ಕೆಂಪು ಗುಲಾಬಿ, ಸೇವಂತಿಯ 800 ಹೂಗಳಲ್ಲಿ ಅರಳಿರುವ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ ಇನ್ನೊಂದು ಪ್ರಮುಖ ಆಕರ್ಷಣೆ. ಎರಡೂ ಬದಿಯಲ್ಲಿ ಹೂವಿನ ಸಾಲು ಮಂಟಪಗಳು, ಅಪ್ಪು ಪ್ರತಿಮೆ ಕಣ್ಮನ ಸೆಳೆಯುತ್ತಿದೆ.

ಎತ್ತಿನ ಬಂಡಿ, ಹೊಸಪೇಟೆಯ ಬಾಳೆ, ಹರಪನಹಳ್ಳಿಯ ಟೊಮೆಟೊ, ಹಗರಿಬೊಮ್ಮನಹಳ್ಳಿಯ ದಾಳಿಂಬೆ, ಹಡಗಲಿಯ ಮಲ್ಲಿಗೆ, ಕೊಟ್ಟೂರಿನ ಈರುಳ್ಳಿ, ಕೂಡ್ಲಿಗಿಯ ಹುಣಸೆ ಮಾದರಿ ಕೂಡ ಗಮನ ಸೆಳೆಯುತ್ತಿವೆ. ಅಪರೂಪದ ಗಿಡ ಮೂಲಿಕೆ ಸಸ್ಯಗಳು, ಹಣ್ಣು, ಹಂಪಲಿನ ಮಳಿಗೆಗಳು, ಕೈತೋಟ, ಉದ್ಯಾನವನ, ವರ್ಟಿಕಲ್‌ ಗಾರ್ಡ್‌ನ್‌, ಹೂಕುಂಡಗಳ ಸೈಕಲ್‌ ಮಾದರಿ, ಹೂಗಳಲ್ಲಿ ಅರಳಿದ ಕಡಲೆಕಾಳು ಗಣಪ, ಸಾಸಿವೆ ಕಾಳು ಗಣಪ, ಉಗ್ರ ನರಸಿಂಹ, ಪುರಂದರ ಮಂಟಪ, ನರ್ತಕಿಯರು ಆಕರ್ಷಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು