ಹೊಸಪೇಟೆ (ವಿಜಯನಗರ): ಹಂಪಿ ಪ್ರದೇಶದಲ್ಲಿ ಅನಧಿಕೃತವಾಗಿ ದ್ವಿಚಕ್ರ ವಾಹನ ಬಾಡಿಗೆಗೆ ನೀಡುತ್ತಿರುವುದನ್ನು ವಿರೋಧಿಸಿ ಸೋಮವಾರ ಹಂಪಿ, ಕಮಲಾಪುರ, ಕಡ್ಡಿರಾಂಪುರಗಳ ಆಟೊಗಳು ಮುಷ್ಕರ ನಡೆಸಲಿದ್ದು, ಇಲ್ಲಿನ ಆರ್ಟಿಒ ಕಚೇರಿ ಬಳಿ ಪ್ರತಿಭಟನೆ ನಡೆಸಲಿವೆ.

ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ (ಎಫ್ಕೆಎಆರ್ಡಿಯು) ಮತ್ತು ವಿಜಯನಗರ ಆಟೊ ಚಾಲಕರ ಸಂಘದ ಹೊಸಪೇಟೆ ತಾಲ್ಲೂಕು ಸಮಿತಿಗಳಿಂದ ಈ ಪ್ರತಿಭಟನೆ ನಡೆಯಲಿದೆ ಎಂದು ಕಾರ್ಮಿಕ ಮುಖಂಡ ಸಂತೋಷ್ ಕುಮಾರ್ ಕೆ.ಎಂ.ತಿಳಿಸಿದ್ದಾರೆ.

‘ಕಮಲಾಪುರದಲ್ಲಿ ಒಂದು ಸಂಸ್ಥೆಗೆ ಬಾಡಿಗೆ ಬೈಕ್ಗೆ ಅನುಮತಿ ನೀಡಲಾಗಿತ್ತು. ಆದರೆ ಈಚೆಗೆ ಬೆಂಗಳೂರಿನಲ್ಲಿ ನೆಲೆ ಹೊಂದಿರುವ ಕೆಲವು ಸಂಸ್ಥೆಗಳು ಸಹ ಇಲ್ಲಿ ಫ್ರಾಂಚೈಸಿ ನೀಡಿ ಬೈಕ್ ಬಾಡಿಗೆಗೆ ನೀಡಲು ಮುಂದಾಗಿವೆ. ಅವುಗಳು ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಿಸುತ್ತಿವೆ. ಇದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.