ಕೊಟ್ಟೂರು: ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ 7 ಮನೆಗಳು ಭಾಗಶಃ ಹಾನಿಯಾಗಿವೆ.
ಕೋಗಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಕಾಡಪ್ಪನವರ ಹಿರಿಯಮ್ಮ ಎಂಬ ವೃದ್ಧೆ ಗಾಯಗೊಂಡಿದ್ದು, ಇವರಿಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.
ಹೊಸಕೋಡಿಹಳ್ಳಿ, ಕೋಗಳಿ, ಉಜ್ಜಯಿನಿ, ಕಂದಗಲ್ಲು, ನಿಂಬಳಗೆರೆ ಗ್ರಾಮಗಳಲ್ಲಿ ತಲಾ ಒಂದು ಮನೆಗಳು ಹಾಗೂ ಚಿನ್ನೇನಹಳ್ಳಿ ಗ್ರಾಮದಲ್ಲಿ ಎರಡು ಮನೆಗಳು ಹಾನಿಯಾಗಿವೆ.
ಕೊಟ್ಟೂರು ಹೋಬಳಿ 8.8 ಮಿ.ಮೀ ಹಾಗೂ ಕೋಗಳಿ ಹೋಬಳಿ 7.4 ಮಿ.ಮೀ ಸೇರಿ ತಾಲ್ಲೂಕಿನಾದ್ಯಂತ ಸರಾಸರಿ 8.1 ಮಿ.ಮೀ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.