ಗುರುವಾರ , ಆಗಸ್ಟ್ 18, 2022
25 °C

ಕೂಡ್ಲಿಗಿ: ಮರಳು‌ ದಿನ್ನೆ ಕುಸಿದು ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಐಗಳ ಮಲ್ಲಾಪುರದಲ್ಲಿ ಸೋಮವಾರ ಮರಳು ದಿನ್ನೆ‌ ಕುಸಿದು ಮಹಾಂತೇಶ (35) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಹಾಂತೇಶ ತನ್ನ ಎತ್ತಿನ ಗಾಡಿಯಲ್ಲಿ ಮರಳು ತುಂಬಿಕೊಂಡು ಬರಲು ಗ್ರಾಮದ ಹೊರವಲಯದಲ್ಲಿನ ಕೆರೆ ಬಳಿ ಹೋಗಿದ್ದರು. ಮರಳು  ತುಂಬುವಾಗ ಮೇಲಿಂದ‌ ಮರಳು ದಿನ್ನೆ ಮೇಲೆ ಕುಸಿದು ಬಿದ್ದಿದೆ. ಅದರಿಂದ ಹೊರಬರಲಾರದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು