ಹೊಸಪೇಟೆ (ವಿಜಯನಗರ): ವಿಜಯನಗರ ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿ ‘ಉತ್ಸವ್ ದಿ ಹಂಪಿ’ ಅಂಗವಾಗಿ ಆಯೋಜಿಸಿರುವ ಐದನೇ ಆವೃತ್ತಿಯ ಆಫ್ ರೋಡ್ ಚಾಲೆಂಜ್ ರಾಷ್ಟ್ರೀಯ ಮೋಟರ್ ಸ್ಪೋರ್ಟ್ಸ್ ಶನಿವಾರ ಇಲ್ಲಿ ಆರಂಭವಾಗಿದ್ದು, ಮಾಡಿಫೈಡ್ ಡೀಸೆಲ್ ವಿಭಾಗದಲ್ಲಿ ಮನೋಜ್ ಬಿರಾದಾರ ಮತ್ತು ಸಹಚಾಲಕ ಮುಜ್ಜು ಜೋಡಿಯು 295 ಪಾಯಿಂಟ್ ಗಳಿಸಿ, ಮುಂಚೂಣಿಯಲ್ಲಿದ್ದಾರೆ.

ಸ್ಟಾಕ್ ಪೆಟ್ರೋಲ್ ವಿಭಾಗದಲ್ಲಿ ಎಲ್ಲಾ ಮೂರು ಹಂತಗಳಲ್ಲಿ ಪ್ರತಾಪ್ ರಾಜೇಂದ್ರ ಕರಾಡಕರ್ ಮತ್ತು ಕಾಳಿದಾಸ ಡೋಂಗ್ರೆ (300) ಅಗ್ರಸ್ಥಾನದಲ್ಲಿದ್ದರೆ, ಸ್ಟಾಕ್ ಡೀಸೆಲ್ ವಿಭಾಗದಲ್ಲಿ ಆದಿನಾರಾಯಣ ಗೌಡ ಮತ್ತು ಶಿಖಿನ್ ದುಂಗವತ್ (274) ಮುನ್ನಡೆಯಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಮೀನಾ ಶ್ರೀಕಾಂತ್ ಮತ್ತು ಅಭಿನಂದಾ ಅವರು ಮೂರೂ ಹಂತಗಳಲ್ಲಿ (300) ಅಗ್ರಸ್ಥಾನದಲ್ಲಿ ಇದ್ದಾರೆ.

ಇತರ ಫಲಿತಾಂಶ: ಥಾರ್ 2020–ಆದರ್ಶ್ ಮತ್ತು ಚಂದ್ರಮೌಳಿ (295), ಮಾಡಿಫೈಡ್ ಪೆಟ್ರೋಲ್–ಡಾ. ಗಿರೀಶ ಪಾಟೀಲ ಮತ್ತು ಮಾದೇವ್ ಕಾವಟೇಕರ್ (200), ಜಿಮ್ಮಿ– ಸಾಬು ಮತ್ತು ರಾಜೀವ್ ಲಾಲ್ (290).

ಹೊಸಪೇಟೆ ಸಮೀಪದ ಕಾರಿಗನೂರು ಪ್ರದೇಶದಲ್ಲಿ ತಗ್ಗು ದಿಣ್ಣೆಗಳು ಇರುವ ಜಾಗದಲ್ಲಿ ನಿರ್ಮಿಸಿದ್ದ ಮೂರು ಟ್ರ್ಯಾಕ್ ಹಾಗೂ ರಾಜಪುರದ ಬೆಟ್ಟ ಪ್ರದೇಶಗಳಲ್ಲಿ ಸ್ಪರ್ಧೆ ನಡೆದವು. ಪ್ರೊ ಮಾಡಿಫೈಡ್, ಮಾಡಿಫೈಡ್ ಹಾಗೂ ಸ್ಟಾಕ್ ವಿಭಾಗಗಳಲ್ಲಿ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.