ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ: ನಿಷ್ಠ ರುದ್ರಪ್ಪ ಮತಯಾಚನೆ

Last Updated 21 ಏಪ್ರಿಲ್ 2021, 12:19 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಿಷ್ಠಿ ರುದ್ರಪ್ಪ ಅವರು ಬುಧವಾರ ನಗರದಲ್ಲಿ ಮತಯಾಚನೆ ಮಾಡಿದರು.

ಪರಿಷತ್ತಿನ ಆಜೀವ ಸದಸ್ಯರು, ಪ್ರಾಧ್ಯಾಪಕರು, ಶಿಕ್ಷಕರು, ಲೇಖಕರನ್ನು ಭೇಟಿಯಾಗಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿದರು.

‘ಕನ್ನಡ ಸೇವೆಗೆ ಈ ಚುನಾವಣೆಗೆ ಸ್ಪರ್ಧಿಸಿರುವೆ. ಚುನಾವಣೆಯಲ್ಲಿ ಬೆಂಬಲಿಸಿ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು’ ಎಂದು ರುದ್ರಪ್ಪ ಮನವಿ ಮಾಡಿದರು.

ನಿವೃತ್ತ ಪ್ರಾಧ್ಯಾಪಕರಾದ ಎಸ್‌. ಶಿವಾನಂದ, ಲಿಂಗಾರೆಡ್ಡಿ, ರೇವಣಸಿದ್ದಪ್ಪ, ವಕೀಲರಾದ ಗುಜ್ಜಲ ನಾಗರಾಜ, ತಾರಿಹಳ್ಳಿ ಹನುಮಂತಪ್ಪ, ಗೋರ್ಕಲ್ ವೀರಭದ್ರಪ್ಪ, ನಾಯಕರ ಹುಲುಗಪ್ಪ, ನಿವೃತ್ತ ಶಿಕ್ಷಕ ಬಸಪ್ಪ, ಅಕ್ಕಿ ನಟರಾಜ್, ಗಾದೆಪ್ಪ, ಡಾ. ಸುಲೋಚನಾ, ಗುಂಡಿ ಮಾರುತಿ, ಸೋ.ದಾ.ವಿರೂಪಾಕ್ಷ ಗೌಡ, ನಂದೀಶ್ವರ ದಂಡೆ, ನಿಂಬಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್, ರಾಮಚಂದ್ರಗೌಡ, ಭಾಗ್ಯಲಕ್ಷ್ಮಿ ಭರಾಡೆ, ಉಮಾಮಹೇಶ್ವರ, ಮಾವಿನಹಳ್ಳಿ ಬಸವರಾಜ್, ವಿಶ್ವನಾಥ ಕೌತಾಳ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT