ಹೊಸಪೇಟೆ (ವಿಜಯನಗರ): ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ದೇವದಾಸ್ ಮತ್ತು ಅವರ ಕಚೇರಿಯ ಅಕೌಂಟೆಂಟ್ ಮಾರುತಿ ಅವರು ಮಂಗಳವಾರ ಇಲ್ಲಿನ ತಮ್ಮ ಕಚೇರಿಯಲ್ಲಿ ಗುತ್ತಿಗೆದಾರರೊಬ್ಬರಿಂದ ₹1 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
.ವಿಜಯನಗರ | ಟ್ರಾವೆಲ್ಲರ್ ನೂಕ್; ಮಾರ್ಚ್ 30ರ ಗಡುವು: ಡಿ.ಸಿ ಸೂಚನೆ.
ಹೂವಿನಹಡಗಲಿಯ ಗುತ್ತಿಗೆದಾರ ಮಹೇಶ್ ಹಲಗೇರಿ ಅವರು ಲೋಕೋಪಯೋಗಿ ಇಲಾಖೆಯ ಟೆಂಡರ್ ಮೂಲಕ ಕಾಮಗಾರಿ ಪಡೆದುಕೊಂಡು ಕಾಮಗಾರಿ ಮುಗಿಸಿದ್ದರು. ಬಿಲ್ ಮಂಜೂರಾತಿಗಾಗಿ ದೇವದಾಸ್ ಮತ್ತು ಮಾರುತಿ ಅವರು ಶೇ 10ರಷ್ಟು ಕಮಿಷನ್ ರೂಪದಲ್ಲಿ ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಯುಕ್ತಕ್ಕೆ ದೂರು ನೀಡಲಾಗಿತ್ತು. ಅದರಂತೆ ಗುತ್ತಿಗೆದಾರರು ಲಂಚ ನೀಡುತ್ತಿದ್ದಾಗ ಈ ಇಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದರು. ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಎಸ್.ಚಲವಾದಿ, ಇನ್ಸ್ಪೆಕ್ಟರ್ಗಳಾದ ರಾಜೇಶ್ ಎಸ್.ಲಮಾಣಿ, ಅಮರೇಶ್ ಹುಬ್ಳಿ, ಸಿಬ್ಬಂದಿ ಸುರೇಶ, ರೇಣುಕಪ್ಪ. ಕುಮಾರ ನಾಯ್ಕ್, ಚನ್ನಬಸಪ್ಪ, ಕೃಷ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
.ವಿಜಯನಗರ: ಮೈಲಾರಜ್ಜನ ಜಾತ್ರೆಗೆ ಭಕ್ತರ ದಂಡು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.