ಹರಪನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಪಂಚಗಣಾಧೀಶ್ವರ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಅವರಿಗೆ ಶನಿವಾರ ಮುಸ್ಲಿಂ ಮುಖಂಡರು ಕುರಾನ್ ಗ್ರಂಥವನ್ನು ಉಡುಗೊರೆ ನೀಡಿ, ಯುಗಾದಿ ಹಬ್ಬದ ಶುಭಾಶಯವನ್ನು ಕೋರಿದರು.

ಮಂಗಳೂರಿನ ಧರ್ಮಗುರು ಮಕ್ಸೂದ್ ಉಮ್ರಿ ಮಾತನಾಡಿ, ‘ಕುರಾನ್ ಗ್ರಂಥವು ಮನುಷ್ಯನ ಜೀವನ ಸಾಗಿಸುವ ಕ್ರಮಗಳ ಬಗ್ಗೆ ತಿಳಿಸುತ್ತದೆ. ಯಾರೂ ಮೇಲಲ್ಲ, ಕೀಳಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುತ್ತದೆ’ ಎಂದರು.

ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ದೇವನೊಬ್ಬ ನಾಮ ಹಲವು. ಮುಸ್ಲಿಮರಲ್ಲಿ ಉಪಪಂಗಡಗಳಿವೆ. ಎಲ್ಲರೂ ಕುರಾನ್ ಓದುತ್ತಾರೆ. ರಂಜಾನ್ ಮಾಸಾಚರಣೆಯ ಶಿಸ್ತು, ಉಪವಾಸಕ್ಕೆ ವಿಶೇಷ ಮಹತ್ವ ಇದೆ. ಈದ್ ಶುಭಾಶಯಗಳು’ ಎಂದರು.

ಮುಖಂಡರಾದ ವೈ.ಡಿ.ಅಣ್ಣಪ್ಪ, ಪ್ರಶಾಂತ್ ಪಾಟೀಲ, ಕೆರೆಗುಡಿಹಳ್ಳಿ ಹಾಲೇಶ್, ಐ.ಸಲಾಂ, ರಹಮತ್ ಉಲ್ಲಾ, ಅಬ್ದುಲ್ ಫತೀರ್, ಅಬ್ದುಲ್ ಸಮದ್, ರೆಹಮಾನ್, ನವೀದ್, ರೆಹಾನ್ ಮತ್ತು ಎ.ಬಿ.ಮಂಜುನಾಥ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.