ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಮಳಗೆ ಪಟ್ಟಣದ ಹೊರವಲಯದಲ್ಲಿನ ಉಜ್ಜಯಿನಿಗೆ ಸಂಪರ್ಕ ಕಲ್ಪಸುವ ರಸ್ತೆ ಕುಸಿದು ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-50ರ ಪಕ್ಕದಲ್ಲಿ ಪಾವಗಡ ಕುಡಿಯುವ ನೀರು ಯೋಜನೆಯ ಪೈಪ್ ಲೈನ್ ಅಳವಡಿಸಲು ಉಜ್ಜಯಿನಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದಲ್ಲಿ ತಗ್ಗು ಅಗೆದು ಪೈಪ್ ಹಾಕಲಾಗಿದೆ. ನಂತರ ಒಣ ಮಣ್ಣಿನಿಂದ ಮುಚ್ಚಿ ಮೇಲೆ ಸಿಮೆಂಟ್ ಹಾಕಲಾಗಿದೆ. ಆದರೆ ಮಣ್ಣನ್ನು ಹದಗೊಳಿಸದೆ ಸಿಮೆಂಟ್ ಹಾಕಿದ್ದರಿಂದ ಮೊದಲ ಮಳೆಗೇ ರಸ್ತೆ ಒಂದೂವರೆ ಅಡಿಯಷ್ಟು ಕುಸಿದಿದೆ. ಉಜ್ಜಯಿನಿ ಭಾಗಕ್ಕೆ ಹೋಗುವ ಪ್ರಯಾಣಿಕರು ಇದೀಗ ಪರದಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.