ಶನಿವಾರ, ಮೇ 28, 2022
21 °C

ಹೊಸಪೇಟೆ: ಚರ್ಚ್ ಆವರಣದಲ್ಲಿ ಸಂಕ್ರಾಂತಿ ಆಚರಿಸಿದ ಕ್ಯಾಥೊಲಿಕ್ ಕ್ರೈಸ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ನಗರದ ಸೆಕ್ರಡ್ ಹಾರ್ಟ್ ಚರ್ಚ್ ಆವರಣದಲ್ಲಿ ಕ್ಯಾಥೊಲಿಕ್ ಕ್ರೈಸ್ತರು ಶನಿವಾರ ಸಂಕ್ರಾಂತಿ ಆಚರಿಸಿದರು.

ಪ್ರಾರ್ಥನಾ ಮಂದಿರ ಒಳಗಿನ ಪೂಜಾ ಪೀಠವನ್ನು ಕಬ್ಬಿನ ದಂಟು, ಹೂವಿನಿಂದ ಸಿಂಗರಿಸಿದ್ದರು. ಚರ್ಚ್ ಆವರಣದಲ್ಲಿ ಗಡಿ ಪೊಂಗಲ್ ತಯಾರಿಸಿ ವಿತರಿಸಿದರು. ಶುಭಾಶಯ ವಿನಿಮಯ ಮಾಡಿಕೊಂಡರು. 

ಧರ್ಮಗುರು ಆರೋಗ್ಯನಾಥನ್, ‘ಪ್ರಕೃತಿ ಬದಲಾವಣೆ ಕಾಲವೇ ಸಂಕ್ರಾಂತಿ. ಸುಗ್ಗಿ ಆಚರಣೆಗೆ ರೈತರು ಕಾಯುತ್ತಾರೆ. ಅವರು ಬೆಳೆದ ಫಸಲು ತಿಂದು ನಾವು ಆರೋಗ್ಯವಾಗಿದ್ದೇವೆ. ಅವರ ಋಣ ದೊಡ್ಡದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು