ಮಂಗಳವಾರ, ಸೆಪ್ಟೆಂಬರ್ 21, 2021
21 °C

ವಿಜಯನಗರ: ವಿಶ್ವಾಸಾರ್ಹತೆ ಮೊದಲ ಆದ್ಯತೆ -ಎಂ.ಬಿ. ಲಿಂಗದಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ‘ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಸಿ, ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಮೊದಲ ಆದ್ಯತೆ ಆಗಬೇಕು’ ಎಂದು ಶಿವಸಂಗಮ ಚಿಟ್ಸ್‌ ಟ್ರಸ್ಟ್‌ ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕ ಎಂ.ಬಿ. ಲಿಂಗದಳ ಹೇಳಿದರು.

ಸೋಮವಾರ ನಗರದಲ್ಲಿ ನಡೆದ ಟ್ರಸ್ಟ್‌ನ ಎರಡನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಅಭಿನಂದನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ಟ್ರಸ್ಟ್‌ ರಾಜ್ಯದಲ್ಲಿ ಒಟ್ಟು 11 ಶಾಖೆಗಳನ್ನು ಹೊಂದಿದೆ. ಉತ್ತಮ ಸೇವೆ, ವಿಶ್ವಾಸಾರ್ಹತೆ ಹಾಗೂ ಸಿಬ್ಬಂದಿಯ ದಕ್ಷತೆಯಿಂದ ಪ್ರತಿ ವರ್ಷ ಟ್ರಸ್ಟ್‌ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಿಟ್ಸ್‌ಗಳಲ್ಲಿ ಜನ ಹಣ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಆದರೆ, ನಮ್ಮ ಟ್ರಸ್ಟ್‌ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದರು.

ನಿರ್ದೇಶಕರಾದ ಹೆಬ್ಬಿಲಿಂಗ, ಮಹೇಶ್‌ ಗಿಣಿಗೆರೆ, ರಾಜು, ರೇವಣ್ಣಸಿದ್ದಪ್ಪ, ಉದ್ಯಮಿ ಕಾಸೆಟ್ಟಿ ಉಮಾಪತಿ, ಬ್ಯಾಂಕ್‌ ವ್ಯವಸ್ಥಾಪಕ ಗುರುರಾಜ, ಗೋವಿಂದ ಕುಲಕರ್ಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.